ಪ್ರಯಾಣ ನಿಷೇಧಿಸಿದ ಸೌದಿ ಅರೇಬಿಯಾ!

ಸೋಮವಾರ, 23 ಮೇ 2022 (09:21 IST)
ರಿಯಾದ್ : ಕೋವಿಡ್-19 ಹರಡುವಿಕೆ ಹೆಚ್ಚಾಗುತ್ತಿರುವ ಹಿನ್ನೆಲೆ ಸೌದಿ ಅರೇಬಿಯಾ ತನ್ನ ನಾಗರಿಕರನ್ನು ಭಾರತ ಸೇರಿದಂತೆ 15 ದೇಶಗಳಿಗೆ ಪ್ರಯಾಣೀಸುವುದನ್ನು ನಿಷೇಧಿಸಿದೆ.
 
ಭಾರತ, ಲೆಬನಾನ್, ಸಿರಿಯಾ, ಟರ್ಕಿ, ಇರಾನ್, ಅಫ್ಘಾನಿಸ್ತಾನ, ಯೆಮೆನ್, ಸೊಮಾಲಿಯಾ, ಇಥಿಯೋಪಿಯಾ, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ, ಲಿಬಿಯಾ, ಇಂಡೋನೇಷಿಯಾ, ವಿಯೆಟ್ನಾಂ, ಅರ್ಮೇನಿಯಾ, ಬೆಲಾರಸ್ ಮತ್ತು ವೆನೆಜುವೆಲಾ ದೇಶಗಳಿಗೆ ಪ್ರಯಾಣಿಸದಂತೆ ಸೌದಿ ಅರೇಬಿಯಾ ನಾಗರಿಕರಿಗೆ ಎಚ್ಚರಿಕೆ ನೀಡಿದೆ. 

ಕೆಲವು ದಿನಗಳಿಂದ ಹಲವಾರು ದೇಶಗಳಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿದ್ದು, ಈ ನಡುವೆ ಕೆಲವು ದೇಶಗಳಲ್ಲಿ ಮಂಕಿ ಪಾಕ್ಸ್ ಪ್ರಕರಣಗಳು ಪತ್ತೆಯಾಗುತ್ತಿರುವ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಸಾರ್ವಜನಿಕರಿಗೆ ಇತರ ದೇಶಗಳಿಗೆ ಪ್ರಯಾಣಿಸದಂತೆ ಆರೋಗ್ಯ ಸಚಿವಾಲಯ ಶನಿವಾರ ಸೂಚಿಸಿದೆ.

ಮೇಲೆ ನೀಡಿರುವ ಈ ದೇಶಗಳಿಗೆ ಪ್ರಯಾಣಿಸಲು ಇಚ್ಚಿಸುವವರಿಗೆ ಈ ನಿಷೇಧವು ಅನ್ವಯಿಸುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ