ಗುಂಡಿಟ್ಟು ಕೊಂದ ತುರ್ಕಿ ರಾಜಕುಮಾರನಿಗೆ ಗಲ್ಲು

ಬುಧವಾರ, 19 ಅಕ್ಟೋಬರ್ 2016 (16:46 IST)

ಬೈರುತ್: ಮೂರು ವರ್ಷಗಳ ಹಿಂದೆ ವ್ಯಕ್ತಿಯೊಬ್ಬನನ್ನು ಗುಂಡಿಕ್ಕಿ ಕೊಂದ ಸೌದಿಯ ರಾಜಕುಮಾರನಿಗೆ ರಾಜಧಾನಿ ರಿಯಾದ್ ನಲ್ಲಿ  ಬುಧವಾರ ಮುಂಜಾನೆ ಮರಣ ದಂಡನೆ ವಿಧಿಸಲಾಗಿದೆ.
 


 

ರಾಜಕುಮಾರ ತುರ್ಕಿ ಬಿನ್ ಸೌದ್ ಅಲ್-ಕಬೀರ್ ಎಂಬಾತನೇ ಮರಣ ದಂಡನೆ ಒಳಗಾದ ವ್ಯಕ್ತಿಯಾಗಿದ್ದಾನೆ. ನಾಲ್ಕು ದಶಕಗಳಲ್ಲಿ ರಾಜ ಮನೆತನದ ಓರ್ವ ಸದಸ್ಯನಿಗೆ ಇಂಥ ಶಿಕ್ಷೆ ನೀಡಿರುವುದು ಇದೇ ಮೊದಲಾಗಿದೆ. ರಾಜಕುಮಾರನನ್ನುಮರಣ ದಂಡನೆಗೆ ಒಳಪಡಿಸಿರುವ ಕುರಿತು ಸರಕಾರಿ ವಾರ್ತಾ ಸಂಸ್ಥೆ ತಿಳಿಸಿದೆ. ಆದರೆ, ಯಾವ ರೀತಿ ಮರಣ ದಂಡನೆ ನೀಡಲಾಗಿದೆ ಎನ್ನುವುದನ್ನು ಬಹಿರಂಗ ಪಡಿಸಿಲ್ಲ.
 

ಮೂರು ವರ್ಷದ ಹಿಂದೆ ರಾಜಧಾನಿ ರಿಯಾತ್ ನಲ್ಲಿ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದಿತ್ತು. ಸಂದರ್ಭದಲ್ಲಿ ರಾಜಕುಮಾರ ಸೌದ್ ಅಲ್-ಕಬೀರ್ ಆಕ್ರೋಶಗೊಂಡು ವ್ಯಕ್ತಿಯೊಬ್ಬನ ಮೇಲೆ ಗುಂಡು ಹಾರಿಸಿದ್ದ. ಆ ಗುಂಡು ವ್ಯಕ್ತಿಯ ನೆತ್ತಿಗೆ ನೇರವಾಗಿ ಬಿದ್ದ ಪರಿಣಾಮ ಅಲ್ಲಿಯೇ ಅಸುನೀಗಿದ್ದ. ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿ, ಮೂರು ವರ್ಷಗಳ ಕಾಲ ವಾದ-ವಿವಾದ ನಡೆದಿತ್ತು. ಕೊನೆಗೂ ನ್ಯಾಯಾಲಯ ರಾಜಕುಮಾರ ದೋಷಿಯೆಂದು ತೀರ್ಪಿತ್ತು, ಮರಣ ದಂಡನೆ ಶಿಕ್ಷೆಗೆ ಆದೇಶಿಸಿತ್ತು.
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ