ಅಮೆರಿಕದ ಕಾಪ್ ಹೇಟಿಂಗ್ ಕ್ವೀನ್ಸ್ ಕೌನ್ಸಿಲ್ನ ಟಿಫಾನಿ ಕ್ಯಾಬನ್ ಅವರು ಲೈಂಗಿಕ ಕಾರ್ಯಕರ್ತೆಯರ ಉದ್ಯಮವನ್ನ ಕಾನೂನುಬದ್ಧಗೊಳಿಸುವ ಹಾಗೂ ಲೈಂಗಿಕ ಕಾರ್ಯಕರ್ತೆಯರಿಗೆ ಸಹಾಯ ನೀಡುವ ಸಂಬಂಧ ಹೊಸ ಮಸೂದೆಯೊಂದನ್ನ ಮಂಡಿಸಿದ್ದಾರೆ.
ನ್ಯೂಯಾರ್ಕ್ನಲ್ಲಿ ನಡೆದ ಕ್ವೀನ್ಸ್ ಕೌನ್ಸಿಲ್ ಸಭೆಯಲ್ಲಿ ಮಸೂದೆ ಮಂಡನೆಯಾಗಿದ್ದು, ಸೆಕ್ಸ್ ವೃತ್ತಿ ಅನ್ನೋದು ಅಪರಾಧವಲ್ಲ. ಹಿಂದಿನ ಮತ್ತು ಪ್ರಸ್ತುತ ಲೈಂಗಿಕ ಕಾರ್ಯಕರ್ತೆಯರು ತೆರಿಗೆದಾರರ ನಿಧಿಯ ಸಹಾಯವನ್ನು ಪಡೆಯಬಹುದಾಗಿದೆ.
ಅಲ್ಲದೇ ಈ ಮಸೂದೆಯೂ ಕಾನೂನುಬದ್ಧವಾಗಿರಲಿದ್ದು, ಜೀವನೋಪಾಯಕ್ಕಾಗಿ ದೇಹವನ್ನು ಪ್ರದರ್ಶಿಸುವ ಎಲ್ಲರಿಗೂ ಅನ್ವಯಿಸುತ್ತದೆ. ಅವರು ಸಹಾಯ ಪಡೆದುಕೊಳ್ಳಬಹುದು ಎಂದಿದ್ದಾರೆ.
ನ್ಯೂಯಾರ್ಕ್ ನಗರವು ತನ್ನ ಜನರ ಆರೋಗ್ಯ, ಸುರಕ್ಷತೆ ಮತ್ತು ಆರ್ಥಿಕ ಯೋಗಕ್ಷೇಮವನ್ನು ರಕ್ಷಿಸುವ ಜವಾಬ್ದಾರಿ ಹೊಂದಿದೆ. ಹಾಗಾಗಿ ಜೀವನಕ್ಕಾಗಿ ಏನು ಮಾಡಿದರೂ ಲೆಕ್ಕಿಸುವುದಿಲ್ಲ ಎಂದರಲ್ಲದೇ, ಲೈಂಗಿಕ ಕೆಲಸವೂ ಕೆಲಸವೇ ಆಗಿದೆ ಎಂದು ಕ್ಯಾಬನ್ ಹೇಳಿದ್ದಾರೆ.