ಬ್ರಿಟನ್ ನಲ್ಲಿ ಪಾನ್ ತಿಂದು ಎಲ್ಲೆಂದರಲ್ಲಿ ಉಗಿಯುವವರಿಗೊಂದು ಶಾಕಿಂಗ್ ನ್ಯೂಸ್

ಸೋಮವಾರ, 15 ಏಪ್ರಿಲ್ 2019 (09:19 IST)
ಬ್ರಿಟನ್ : ಬ್ರಿಟನ್ ನ ಲಿಸಿಸ್ಟರ್ ನಗರದಲ್ಲಿ ಗುಟ್ಕಾ ಅಥವಾ ಪಾನ್ ತಿಂದು ಉಗಿಯುವವರಿಗೆ ದಂಡ ವಿಧಿಸಲಾಗುವುದು ಎಂದು ತಿಳಿಸಲಾಗಿದೆ.


ಹೌದು. ಬ್ರಿಟನ್ ನ ಲಿಸಿಸ್ಟರ್ ನಗರದಲ್ಲಿ ಜನರು ಪಾನ್ ತಿಂದು  ಎಲ್ಲೆಂದರಲ್ಲಿ ಉಗಿಯುತ್ತಿರುವುದರಿಂದ ಪೊಲೀಸ್ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆ ,ಪಾನ್ ಜಗಿಯುವುದು ಅನಾರೋಗ್ಯಕರ ಹಾಗೂ ಕಾನೂನಿನ ಅಪರಾಧ. ಯಾರಾದರು ಪಾನ್ ಸೇವಿಸಿ ಉಗಿಯುವುದು ಕಂಡುಬಂದಲ್ಲಿ 150 ಪೌಂಡ್ ದಂಡ ವಿಧಿಸಲಾಗುವುದು ಎಂದು ಸಾರ್ವಜನಿಕ ನೋಟೀಸ್ ರೀತಿಯಲ್ಲಿ ಬೋರ್ಡ್ ಹಾಕಿದೆ.


150 ಪೌಂಡ್ ದಂಡವೆಂದರೆ ಭಾರತೀಯ ಕರೆನ್ಸಿ ಪ್ರಕಾರ 13,581 ರೂ. ದಂಡ ಕಟ್ಟಬೇಕಾಗುತ್ತದೆ. ಅದರಲ್ಲೂ ಈ ಫಲಕವನ್ನು ಗುಜರಾತಿ ಭಾಷೆ ಹಾಗೂ ಇಂಗ್ಲಿಷ್ ನಲ್ಲಿ ಫಲಕ ಹಾಕಿರುವುದು ಆನ್ ಲೈನ್ ನಲ್ಲಿ ಸಕ್ಕತ್ ವೈರಲ್ ಆಗಿದೆ. ಭಾರತೀಯರು ಎಲ್ಲೇ ಹೋದರು ಗುಟ್ಕಾ, ಪಾನ್ ತಿನ್ನುವುದನ್ನ ಬಿಡುವುದಿಲ್ಲ, ಅಲ್ಲದೇ ತಿಂದು ಕಂಡ ಕಂಡಲ್ಲಿ ಉಗಿಯುತ್ತಿದ್ದಾರೆ ಎಂಬುದು ಇದರಿಂದ ತಿಳಿಯುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ