ಸಲಿಂಗ ಕಾಮ, ವ್ಯಭಿಚಾರ ಮಾಡಿದವರಿಗೆ ಈ ದೇಶದಲ್ಲಿ ಕಲ್ಲುಹೊಡೆದು ಸಾಯಿಸುತ್ತಾರಂತೆ

ಶುಕ್ರವಾರ, 29 ಮಾರ್ಚ್ 2019 (09:48 IST)
ಬ್ರೂನೈ : ಭಾರತದಲ್ಲಿ ಸಲಿಂಗ ಕಾಮ ಅಪರಾಧವಲ್ಲ ಎಂದು ಕಾನೂನು ಹೇಳಿದರೆ ಈ ದೇಶದಲ್ಲಿ ಮಾತ್ರ ಸಲಿಂಗ ಕಾಮ ಮತ್ತು ವ್ಯಭಿಚಾರ ಮಾಡಿದವರಿಗೆ ಕಲ್ಲು ಹೊಡೆದು ಸಾಯಿಸುವ ಶಿಕ್ಷೆ ವಿಧಿಸಲಾಗಿದೆ.

ಹೌದು ಆಗ್ನೇಯ ಏಶ್ಯದಲ್ಲಿರುವ ರಾಜಾಡಳಿತದ ಸಣ್ಣ ದೇಶ ಬ್ರೂನೈಯಲ್ಲಿ ಸಲಿಂಗ ಕಾಮ ಮತ್ತು ವ್ಯಭಿಚಾರವನ್ನು ಕಲ್ಲು ಹೊಡೆದು ಸಾಯಿಸುವ ಅಪರಾಧವನ್ನಾಗಿ ಮಾಡಲಾಗಿದ್ದು, ಈ ಹೊಸ ಕಾನೂನು ಎಪ್ರಿಲ್ 3ರಿಂದ ಜಾರಿಗೆ ಬರಲಿದೆ.

 

ಈ ನೂತನ ಕಠಿಣ ಕಾನೂನುಗಳನ್ನು 2014ರಲ್ಲೇ ಘೋಷಿಸಲಾಗಿತ್ತು ಹಾಗೂ ಹಂತ ಹಂತವಾಗಿ ಅವುಗಳನ್ನು ಜಾರಿಗೆ ತರಲಾಗಿದೆ. ಅದರ ಜೊತೆಗೆ ಕಳ್ಳತನಕ್ಕಾಗಿ ಕೈಕಡಿಯುವ ಶಿಕ್ಷೆಯನ್ನೂ ಈ ಕಾನೂನಿನಲ್ಲಿ ಘೋಷಿಸಲಾಗಿದೆ. ಈ ಹೊಸ ಕಾನೂನಿನ ಬಗ್ಗೆ ಮಾನವಹಕ್ಕು ಗುಂಪುಗಳು ಆಘಾತ ವ್ಯಕ್ತಪಡಿಸಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ