ಈಜಲು ಹೋದವನ ಮರ್ಮಾಂಗಕ್ಕೆ ಮೀನು ಕಚ್ಚಿ ಅವಾಂತರ!
ಚೀನಾದ ಸನ್ಯಾ ನಗರದ ರೆಸಾರ್ಟ್ ಒಂದರಲ್ಲಿ ವಿಶ್ರಾಂತಿಗೆ ಬಂದಿದ್ದ ವ್ಯಕ್ತಿ ಸುಂದರ ಬೀಚ್ ನಲ್ಲಿ ಈಜಾಡುತ್ತಿದ್ದಾಗ ಆತನಿಗೇ ಗೊತ್ತಾಗದಂತೆ ಪ್ಯಾಂಟ್ ಒಳಗೆ ಸ್ಟಿಂಗ್ ರೇ ಜಾತಿಯ ಮೀನು ಸೇರಿಕೊಂಡಿದೆ. ಮೀನು ಕಚ್ಚಿ ಈತ ನೋವಿನಿಂದ ನರಳಾಡುತ್ತಿದ್ದರೆ ನೆರವಿಗೆ ಬಂದ ವೈದ್ಯಕೀಯ ಪಡೆ ಹೇಗೋ ಸಾಹಸ ಮಾಡಿ ಅದನ್ನು ಹೊರ ತೆಗೆದಿದ್ದಾರೆ.
ಈತನ ನರಳಾಟದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸ್ಟಿಂಗ್ ರೇ ಮೀನು ಅಪಾಯಕಾರಿಯಾಗಿದ್ದು, ಇದು ಈತ ಈಜಾಡುತ್ತಿದ್ದ ಪ್ರದೇಶದಲ್ಲಿ ಸಮುದ್ರದಾಳದಲ್ಲಿ ಸಾಕಷ್ಟು ಸಂಖ್ಯೆಯಲ್ಲಿವೆ ಎನ್ನಲಾಗಿದೆ.