ತಾಯಿ ಕಳುಹಿಸಿದ ಸಿಟ್ಟಿನ ಇಮೋಜಿಗೆ ಬಲಿಯಾಯ್ತು ಮಗಳ ಪ್ರಾಣ

ಶನಿವಾರ, 21 ಸೆಪ್ಟಂಬರ್ 2019 (05:49 IST)
ಲಂಡನ್ : ತಾಯಿ ಕಳುಹಿಸಿದ ಸಿಟ್ಟಿನ ಇಮೋಜಿಗಳಿಂದ ಮಗಳು ಹೃದಯಾಘಾತವಾಗಿ ಸಾವನಪ್ಪಿದ ಘಟನೆ ಲಂಡನ್‌ ನಲ್ಲಿ ನಡೆದಿದೆ.




33 ವರ್ಷದ ಶಬೀನಾ ಮಿಯಾ ಸಾವನಪ್ಪಿದ ಮಗಳು. ಈಕೆ ತನ್ನ ಸಾಮಾಜಿಕ ಜಾಲತಾಣದ ಪುಟದಲ್ಲಿ ಕೆಲವು ವಿಡಿಯೋಗಳನ್ನು ಹಾಕಿದ್ದಳು. ಇದಕ್ಕೆ ತಾಯಿ ತನ್ನ ಐ ಪ್ಯಾಡ್‌ ನ ದೋಷದಿಂದ ಲೈಕ್ ಬಟನ್ ಒತ್ತುವ ಬದಲು, ಸಿಟ್ಟಿನ ಇಮೋಜಿಗಳನ್ನು ಕಳುಹಿಸಿದ್ದರು.


ಇದರಿಂದ ಬೇಸರಗೊಂಡಿದ್ದ ಶಬೀನಾ ತಾಯಿಯ ಅಕೌಂಟನ್ನೇ ಬ್ಲಾಕ್ ಮಾಡಿದ್ದಲ್ಲದೇ ತಾಯಿಯ ಜೊತೆ ಮಾತು ಬಿಟ್ಟಿದ್ದಳು. ಇದನ್ನು ತಾಯಿ ಪ್ರಶ್ನಿಸಿದ್ದಾಳೆ. ಆದರೆ ಮರುದಿನ ಶಬೀನಾ ಮೃತಪಟ್ಟಿದ್ದು, ಮರಣೋತ್ತರ ಪರೀಕ್ಷೆಗಳಿಂದ ಶಬೀನಾ ಹೃದಯಾಘಾತದಿಂದ ಸಾವನಪ್ಪಿರುವುದಾಗಿ  ವೈದ್ಯರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ