ಶಿಕ್ಷಕನಿಗೆ ಥಳಿತ..!

ಗುರುವಾರ, 1 ಸೆಪ್ಟಂಬರ್ 2022 (16:58 IST)
ಟೀಚರ್‌ಗಳು ಪೆಟ್ಟು ಕೊಡೋ ರೀತಿ ಹೇಗಿರ್ತಿತ್ತು ಅಂದರೆ, 'ಎಲ್ಲವೂ ಅಲ್ಲೇ' ಆಗುತ್ತಿತ್ತು.
ನಿಮ್ಮ ಸಹಪಾಠಿಗಳು ಯಾರೂ ಇದಕ್ಕೆ ಹೊರತಲ್ಲ.
 
ಶಾಲೆಗೆ ತರುವ ಬೆತ್ತಗಳು ಗಟ್ಟಿಮುಟ್ಟಾಗಿದೆಯೇ ಎನ್ನುವುದನ್ನು ಪುಂಡ ಹುಡುಗರನ್ನು ಬೆಂಡೆತ್ತುವ ಮೂಲಕ ಶಿಕ್ಷಕರು ಮಾಡುತ್ತಿದ್ದರು. ಆದರೆ, ಟೀಚರ್‌ಗೆ ಮಕ್ಕಳೆಲ್ಲಾ ಸೇರಿಕೊಂಡು ಹೊಡೆಯುವುದು ಎಲ್ಲಾದರೂ ಕೇಳಿದ್ದೀರಾ..! ಬಹುಶಃ ಆ ಕಾಲದಲ್ಲಿ ಇದರ ಯೋಚನೆ ಮಾಡಿದ್ರೂ ಮತ್ತೆರಡು ಪೆಟ್ಟು ಗ್ಯಾರಂಟಿ ಇರ್ತಿತ್ತು. ಆದೆ, ಜಾರ್ಖಂಡ್‌ನ ಧುಮ್ಕಾದಲ್ಲಿ ಒಂದು ಅಚ್ಚರಿಯ ಘಟನೆಯಾಗಿದೆ. ಗಣಿತ ಪರೀಕ್ಷೆಯಲ್ಲಿ ಕಡಿಮೆ ಅಂಕ ನೀಡಿದ್ದಾರೆ ಎನ್ನುವ ಕಾರಣಕ್ಕೆ ಧುಮ್ಕಾ ಜಿಲ್ಲೆಯಲ್ಲಿನ ವಸತಿ ಶಾಲೆಯ ಗಣಿತ ಶಿಕ್ಷಕರುಗಳನ್ನು ಮರಕ್ಕೆ ಕಟ್ಟಿ ಹೊಡೆದಿದ್ದಾರೆ. ಈ ಕುರಿತಾಗಿ ಯಾವುದೇ ಪೊಲೀಸ್‌ ಪ್ರಕರಣ ದಾಖಲಾಗಿಲ್ಲ. 'ನಾವು ಘಟನೆಯ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದ್ದೇವೆ ಮತ್ತು ಎಲ್ಲಾ ಶಿಕ್ಷಕರೊಂದಿಗೆ ಮಾತುಕತೆ ನಡೆಸಿದ್ದೇವೆ. ನಾವು ಘಟನಾ ಸ್ಥಳವನ್ನು ತಲುಪಿದ ವೇಳೆ, ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಪರೀಕ್ಷೆಯಲ್ಲಿ ಕಡಿಮೆ ಅಂಕಗಳನ್ನು ನೀಡಲಾಗಿದ್ದು, ಈ ಕುರಿತಾಗಿ ಶಿಕ್ಷಕರನ್ನು ಕೇಳಿದಾಗ ಅವರು ಸಮರ್ಪಕವಾಗಿ ಉತ್ತರ ನೀಡಿಲ್ಲ. ಆ ಕಾರಣಕ್ಕಾಗಿ ಹೀಗೆ ಮಾಡಿದ್ದಾಗಿ ತಿಳಿಸಿದ್ದಾರೆ' ಎಂದು ಧುಮ್ಕಾದ ಗೋಪಿಕಂದರ್‌ನ ಬ್ಲಾಕ್‌ ಶಿಕ್ಷಣಾ ವಿಸ್ತರಣಾಧಿಕಾರಿ ಸುರೇಂದ್ರ ಹೆಬ್ರಾಮ್‌ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ