ಕಮಲದ ಜತೆ ರೂಪದರ್ಶಿ ಫೋಟೊ ತೆಗೆಸಿದ್ದಕ್ಕೆ ಭಾರೀ ದಂಡ.. ಯಾಕೆ ಗೊತ್ತಾ…?
ಸೋಮವಾರ, 25 ಸೆಪ್ಟಂಬರ್ 2017 (19:53 IST)
ರಷ್ಯಾ: ಕಮಲದ ಹೂವಿನೊಂದಿಗೆ ಫೋಟೊಗೆ ಪೋಸ್ ಕೊಟ್ಟಿದ್ದ ಮಾಡೆಲ್ ಗೆ ಈಗ ರಷ್ಯಾ ಸರ್ಕಾರ ಭಾರೀ ದಂಡ ವಿಧಿಸಿದೆ.
ವೊಲ್ಗೊಗಾರ್ಡ್ ಒಬ್ಲಾಸ್ಟ್ ಪ್ರದೇಶದ 19 ವರ್ಷದ ರೂಪದರ್ಶಿ ನತಾಲಿಯ ಗುರೋವಾ ಭಾರೀ ದಂಡ ತೆರಬೇಕಾಗಿರುವ ಯುವತಿ. ಅರೆ… ಹೂವು ಹಿಡಿದುಕೊಂಡು ಪೋಸ್ ಕೊಟ್ಟಿದ್ದಕ್ಕೆ ಇಂತಹ ದೊಡ್ಡ ಸಂಕಷ್ಟ ಎದುರಾಯಿತ ಅಂದುಕೊಳ್ಳಬೇಡಿ. ಕಾರಣ ಇಷ್ಟೇ… ರಷ್ಯಾದಲ್ಲಿ ನೆಲುಂಬೋ ಎಂಬ ಜಾತಿಗೆ ಸೇರಿದ ತಿಳಿ ಗುಲಾಬಿ ಬಣ್ಣದ ಕಮಲದ ಹೂವು ಅಳಿವಿನಂಚಿನಲ್ಲಿದೆ. ಇದೇ ನೆಲುಂಬೊ ಕಮಲದ ಜತೆ ತಿಳಿ ಗುಲಾಬಿ ಬಣ್ಣದ ಗೌನ್ ಹಾಕಿದ್ದ ನತಾಲಿಯ ರೊಮ್ಯಾಂಟಿಕ್ ಆಗಿ ಫೋಟೊಗೆ ಪೋಸ್ ಕೊಟ್ಟಿದ್ದಾಳೆ.
ಈ ಫೋಟೊಗಳನ್ನ ಆಕೆ ಆನ್ ಲೈನ್ ಗೆ ಹಾಕಿದ್ದಾಳೆ. ಈಗ ಅದೇ ಆಕೆಗೆ ಸಂಕಷ್ಟ ತಂದಿದೆ. ಫೋಟೊ ಶೂಟ್ ಬಳಿಕ ಆ ಸ್ಥಳದಲ್ಲಿ ಹಲವು ಕಮಲದ ಗಿಡಗಳು ಹಾಳಾಗಿವೆ. ಈ ಫೋಟೊ ಶೂಟ್ ವೇಳೆ ನತಾಲಿಯಾ ಗಿಡಗಳನ್ನು ಹಾಳು ಮಾಡಿದ್ದಾಳೆಂದು ಅಲ್ಲಿನ ಪರಿಸರ ಪ್ರಿಯರು ಈಕೆಯ ವಿರುದ್ಧ ಕಿಡಿಕಾರಿದ್ದಾರೆ. ಅಲ್ಲದೆ ಈ ಬಗ್ಗೆ ಕೂಲಂಕುಷ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಎಷ್ಟು ಹೂವು ಹಾಳು ಮಾಡಿದ್ದಾಳೊ ತನಿಖೆ ಮಾಡಿ, ಅದಕ್ಕೆ ಸರಿಯಾದ ದಂಡ ಕಟ್ಟಲು ಹೇಳಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಫೋಟೊ ಗೀಳಿಗೆ ಅಳಿವಿನಂಚಿನಲ್ಲಿದ್ದ ಕಮಲದ ಗಿಡಗಳು ಹಾಳಾಗಿರುವುದು ಮಾತ್ರ ಬೇಸರದ ಸಂಗತಿ.