ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ: 140ಕ್ಕೂ ಅಧಿಕ ಯೋಧರ ಹತ್ಯೆ
ಶನಿವಾರ, 22 ಏಪ್ರಿಲ್ 2017 (13:59 IST)
ಯೋಧರ ರೀತಿಯೇ ಸಮವಸ್ತ್ರ ಧರಿಸಿ ಸೇನಾ ನೆಲೆ ಮೇಲೆ ದಾಳಿ ನಡೆಸಿರುವ ತಾಲಿಬಾನ್ ಉಗ್ರರು 140ಕ್ಕೂ ಅಧಿಕ ಮಂದಿ ಆಫ್ಘಾನಿಸ್ತಾನದ ಮಜರ್ ಇ ಶರೀಫ್ ನಗರದಲ್ಲಿ ನಡೆದಿದೆ. ಇದು ಆಫ್ಘಾಸ್ಥಾನದ ಇತಿಹಾಸದಲ್ಲಿಯೇ ಸೇನಾ ನೆಲೆ ಮೇಲೆ ನಡೆದ ಅತ್ಯಂತ ಭೀಕರ ದಾಳಿ ಇದಾಗಿದೆ. ನೂರಾರು ಯೋಧರು ಗಾಯಗೊಂಡಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಸರ್ಕಾರ ಇನ್ನೂ ಸಹ ಅಧಿಕೃತ ಪ್ರಕೆಣೆ ಹೊರಡಿಸಬೇಕಿದೆ.
10ಕ್ಕೂ ಅಧಿಕ ತಾಲಿಬಾನ್ ಉಗ್ರರು ಆಫಗನ್ ಆರ್ಮಿ ಯೂನಿಫಾರ್ಮ್ ಧರಿಸಿ ಸೇನಾ ವಾಹನದಲ್ಲೇ ಸೇನಾ ಕ್ಯಾಂಪ್`ಗೆ ನುಗ್ಗಿದ್ದಾರೆ. ರಾತ್ರಿ ಭೋಜನದಲ್ಲಿ ತೊಡಗಿದ್ದ ಸೈನಿಕರ ಮೇಲೆ ಗುಂಡಿನ ಮಳೆಗರೆದಿದ್ದಾರೆ. ಗ್ರೆನೇಡ್`ಗಳಿಂದ ಸಹ ದಾಳಿ ನಡೆಸಿದ್ದಾರೆ.
ನಾಟೋ ಪಡೆಗಳ ಜೊತೆ ಜಂಟಿ ಕಾರ್ಯಾಚರಣೆ ವೇಳೆ ತಾಲಿಬಾನ್`ನ ಮುಖ್ಯ ನಾಯಕರನ್ನ ಹತ್ಯೆಗೆ ಪ್ರತೀಕಾರದ ದಾಳಿ ಎಂದು ತಾಲಿಬಾನ್ ವಕ್ತಾರ ಜಬೀಹುಲ್ಲಾ ಮುಜಾಹಿದ್ ಹೇಳಿದ್ದಾರೆ.
ಘಟನೆಯನ್ನ ತೀವ್ರವಾಗಿ ಖಂಡಿಸಿರುವ ಭರತದ ಪ್ರಧಾನಿ ನರೇಂದ್ರ ಮೋದಿ, ಇದೊಂದು ಉಗ್ರರ ಹೇಡಿತನದ ಕೃತ್ಯ ಎಂದಿದ್ದಾರೆ. ಹತ್ಯೆಗೀಡಾದ ಸೈನಿಕರಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.