ಧರ್ಮಸ್ಥಳ: ಕಳೇಬರಹ ಶೋಧ ಪ್ರಕರಣಕ್ಕೆ ಹೊಸ ಟ್ವಿಸ್ಟ್‌, 13ನೇ ಪಾಯಿಂಟ್ ಬಿಟ್ಟು ಹೊಸ ಸ್ಥಳದತ್ತ ಎಸ್‌ಐಟಿ

Sampriya

ಶುಕ್ರವಾರ, 8 ಆಗಸ್ಟ್ 2025 (13:32 IST)
ಬೆಳ್ತಂಗಡಿ: ಧರ್ಮಸ್ಥಳದ ಪರಿಸರದಲ್ಲಿ ದೂರುದಾರ ಗುರುತಿಸಿದ 12ನೇ ಪಾಯಿಂಟ್‌ಗಳಲ್ಲಿ ಶೋಧ ಕಾರ್ಯ ಮುಗಿಸಿ, 13ನೇ ಪಾಯಿಂಟ್‌ ಅನ್ನು ಬಿಟ್ಟು ಇದೀಗ ದೂರುದಾರ ಗುರುತಿಸಿದ ಹೊಸ ಸ್ಥಳದ ಕಡೆ ಎಸ್‌ಐಟಿ ಶೋಧ ಕಾರ್ಯಕ್ಕೆ ಮುಂದಾಗಿದೆ. 

ಧರ್ಮಸ್ಥಳದ ಸುತ್ತಾಮುತ್ತಾ ಹಲವು ಶವಗಳನ್ನು ಹೂತಿಡಲಾಗಿದೆ ಎಂಬ ಆರೋಪ ಸಂಬಂಧ ಸಾಕ್ಷಿ ದೂರುದಾರ ಗುರುತಿಸಿದ 13 ಪಾಯಿಂಟ್‌ಗಳಲ್ಲಿ ಈಗಾಗಲೇ 12 ಪಾಯಿಂಟ್‌ಗಳಲ್ಲಿ ಶೋಧ ಕಾರ್ಯ ಅಂತ್ಯಗೊಂಡಿದೆ. 6ನೇ ಪಾಯಿಂಟ್‌ ಹಾಗೂ 11ಎ ಪಾಯಿಂಟ್‌ನಲ್ಲಿ ಬಿಟ್ಟರೆ ಬೇರೆ ಯಾವಾ ಪಾಯಿಂಟ್‌ನಲ್ಲೂ ಮೂಳೆಗಳು ಪತ್ತೆಯಾಗಿಲ್ಲ.

ಇದೀಗ ನೇತ್ರಾವತಿ ತಟದ ಜನಬಿಡದಿ ಪ್ರದೇಶದಲ್ಲಿ ಗುರುತಿಸಿರುವ 13ನೇ ಪಾಯಿಂಟ್‌ನಲ್ಲಿ ಇನ್ನೂ ಶೋಧ ಕಾರ್ಯ ನಡೆಸಿಲ್ಲ. ಸಾಕ್ಷಿ ದೂರುದಾರ ಹೇಳಿದಂತೆ ಈ ಪಾಯಿಂಟ್‌ನಲ್ಲಿ ಅತೀ ಹೆಚ್ಚು ಶವಗಳನ್ನು ಈ ಸ್ಥಳದಲ್ಲೇ ಹೂತಿರುವುದಾಗಿ ಹೇಳಿದ್ದು, ಭಾರೀ ಕುತೂಹಲವನ್ನು ಮೂಡಿಸಿದೆ. 

ಇವತ್ತು 13ನೇ ಪಾಯಿಂಟ್‌ನಲ್ಲಿ ಶೋಧ ಕಾರ್ಯ ನಡೆಯುತ್ತದೆ ಎಂದು ಹೇಳಲಾಗಿತ್ತು. ಆದರೆ ಇದೀಗ ಎಸ್‌ಐಟಿ ತಂಡ, ದೂರುದಾರ ಗುರುತಿಸಿದ ಹೊಸ ಸ್ಥಳದ ಕಡೆ ಗಮನ  ಅನ್ನು ಹಾಗೆಯೇ ಉಳಿಸಿ ಇದೀಗ ದೂರುದಾರ ಗುರುತಿಸಿದ ಹೊಸ ಸ್ಥಳಗಳಲ್ಲಿ ಎಸ್‌ಐಟಿ ಶೋಧ ಕಾರ್ಯಕ್ಕೆ ಮುಂದಾಗಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ