ಈಜಿಪ್ಟಿನ ವಿಮಾನ ಕಣ್ಮರೆಗೆ ಭಯೋತ್ಪಾದಕ ಕೃತ್ಯ ಕಾರಣವೇ?

ಗುರುವಾರ, 19 ಮೇ 2016 (17:30 IST)
ಪ್ಯಾರಿಸ್‌ನಿಂದ ಕೈರೊಗೆ ತೆರಳುತ್ತಿದ್ದ ಈಜಿಪ್ಟ್ ಏರ್ ವಿಮಾನದ ನಿಗೂಢ ಕಣ್ಮರೆಗೆ ಭಯೋತ್ಪಾದನೆ ದಾಳಿ ಕಾರಣವಾಗಿರುವ ಸಾಧ್ಯತೆ ಹೆಚ್ಚಾಗಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.  

ಇತ್ತೀಚಿನ ತಿಂಗಳಲ್ಲಿ ಫ್ರಾನ್ಸ್ ಮತ್ತು ಈಜಿಪ್ಟ್ ಇಸ್ಲಾಮಿಕ್ ಉಗ್ರಗಾಮಿಗಳಿಗೆ ಪ್ರಮುಖ ಗುರಿಗಳಾಗಿದ್ದು,  ಅಕ್ಟೋಬರ್‌ನಲ್ಲಿ ರಷ್ಯನ್ ಚಾರ್ಟರ್ ಕಂಪನಿ ಮೆಟ್ರೊಜೆಟ್‌ಗೆ ಸೇರಿದ ಎ321 ವಿಮಾನಕ್ಕೆ ಬಾಂಬ್ ದಾಳಿ ಮಾಡಿದ್ದಕ್ಕೆ ಇಸ್ಲಾಮಿಕ್ ಸ್ಟೇಟ್ ಹೊಣೆ ಹೊತ್ತಿದೆ.
 
 ಈಜಿಪ್ಟ್ ಏರ್ ವಿಮಾನದ ಕಣ್ಮರೆಯಲ್ಲಿ ತಾಂತ್ರಿಕ ದೋಷದ ಅವಕಾಶಗಳು ಕಡಿಮೆಯಾಗಿದೆ ಎಂದು ತಜ್ಞರು ಹೇಳಿದ್ದಾರೆ. ತಾಂತ್ರಿಕ ದೋಷದಲ್ಲಿ ಮುಖ್ಯವಾದ ಮೋಟರ್ ಸ್ಫೋಟದ ಸಾಧ್ಯತೆ ಸಂಭವನೀಯವಲ್ಲ. ಎ320 ಹೊಸದಾಗಿದ್ದು, 2003ರಲ್ಲಿ ಸೇವೆಗೆ ಪ್ರವೇಶಿಸಿದೆ ಎಂದು ಏರೋನಾಟಿಕ್ಸ್ ತಜ್ಞ ಗೆರಾರ್ಡ್ ಫೆಲ್ಡ್‌ಜರ್ ತಿಳಿಸಿದರು.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ