ಪೌರತ್ವ ತಿದ್ದುಪಡಿ ಮಸೂದೆ; ಅಮಿತ್ ಶಾ ವಿರುದ್ಧ ನಿರ್ಬಂಧಕ್ಕೆ ಆಗ್ರಹ

ಬುಧವಾರ, 11 ಡಿಸೆಂಬರ್ 2019 (06:01 IST)
ವಾಷಿಂಗ್ಟನ್: ಭಾರತೀಯ ಸಂಸತ್ತಿನ ಎರಡೂ ಸದನಗಳಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರ ಆದ ತಕ್ಷಣ ಗೃಹ ಸಚಿವ ಅಮಿತ್ ಶಾ ವಿರುದ್ಧ ನಿರ್ಬಂಧ ಹೇರಬೇಕೆಂದು ಅಂತರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಯುಎಸ್ ಆಯೋಗ ಆಗ್ರಹಿಸಿದೆ.



ಸೋಮವಾರದ ಲೋಕಸಭೆಯ ಸದನದಲ್ಲಿ ಅಮಿತ್ ಶಾ ಪೌರತ್ವ ತಿದ್ದುಪಡಿ ಮಸೂದೆಯನ್ನು ಮಂಡಿಸಿದ್ದು, ಇದಕ್ಕೆ ಲೋಕಸಭೆಯಲ್ಲಿ ಅಂಗೀಕಾರ ಸಿಕ್ಕಿದೆ. ಇದೀಗ ರಾಜ್ಯ ಸಭೆಯಲ್ಲಿ ಮಂಡಿಸಲು ಸಿದ್ಧತೆ ನಡೆಸಲಾಗುತ್ತಿದೆ.


ಈ ಬಗ್ಗೆ ವಿರೋಧ ವ್ಯಕ್ತಪಡಿಸಿದ ಅಂತರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಯುಎಸ್ ಆಯೋಗ, ಈ ಮಸೂದೆ ಅತ್ಯಂತ ಸಮಸ್ಯೆಯಿಂದ ಕೂಡಿದ್ದು, ಇದು ಧಾರ್ಮಿಕ ತಾರತಮ್ಯವನ್ನು ಕಾನೂನು ಬದ್ಧಗೊಳಿಸಲಿದೆ ಎಂದು ಆರೋಪಿಸಿ 2 ಸದನಗಳಲ್ಲಿ ಇದು ಅಂಗೀಕಾರವಾದರೆ ಗೃಹ ಸಚಿವ ಅಮಿತ್ ಶಾ ಹಾಗೂ ಇತರ ಪ್ರಮುಖ ನಾಯಕರ ವಿರುದ್ಧ ನಿರ್ಬಂಧ ಹೇರಬೇಕೆಂದು ಆಗ್ರಹಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ