ಕಾಂಡೋಮ್ ಗೆ ತೂತು ಹಾಕಿ ಸುಖಿಸಿ ಜೈಲು ಸೇರಿದ

ಗುರುವಾರ, 8 ಅಕ್ಟೋಬರ್ 2020 (17:26 IST)
ಕಾಂಡೋಮ್ ಗೆ ತೂತು ಹಾಕಿ ಸ್ನೇಹಿತೆಯೊಂದಿಗೆ ಮಲಗಿ ಆ ಕೆಲಸ ಮಾಡಿದ ವ್ಯಕ್ತಿಯೊಬ್ಬ ಜೈಲು ಪಾಲಾಗಿದ್ದಾನೆ.

ಕಾಂಡೋಮ್ ಗೆ ತೂತು ಹಾಕಿ ತನ್ನ ಜೊತೆಗೆ ಮಲಗಿ ಸುಖಿಸಿದ್ದನ್ನು ಸ್ನೇಹಿತೆ ಪತ್ತೆ ಮಾಡಿದ್ದಾಳೆ.

ಟ್ರೈನ್ ಚಾಲಕನಾಗಿರುವ ಆ್ಯಂಡ್ರ್ಯೂ ಲೆವಿಸ್ ನನ್ನ ನಂಬಿಕೆ ವಿರುದ್ಧ ಈ ಕೃತ್ಯ ಮಾಡಿದ್ದಾನೆ ಎಂದು ಆತನ ಸ್ನೇಹಿತ ಕೇಸ್ ದಾಖಲು ಮಾಡಿದ್ದಳು.

ತನ್ನಷ್ಟಕ್ಕೆ ಕಾಂಡೋಮ್ ಹರಿದಿದೆ ಎಂದು ವ್ಯಕ್ತಿ ತಿಳಿಸಿದ್ದಾನೆ. ಆದರೆ ಸ್ನೇಹಿತೆಯ ನಂಬಿಕೆಯನ್ನು ಹುಸಿಗೊಳಿಸಿ ಆಕೆಯನ್ನು ಗರ್ಭಿಣಿ ಮಾಡುವ ಉದ್ದೇಶದಿಂದಲೇ ತೂತು ಹಾಕಲಾಗಿದೆ ಎಂಬುದನ್ನು ಕೋರ್ಟ್ ಪರಿಗಣಿಸಿದೆ ಎನ್ನಲಾಗಿದೆ.

ವ್ಯಕ್ತಿಗೆ 4 ವರ್ಷ ಜೈಲು ಶಿಕ್ಷೆಯನ್ನು ವಿಧಿಸಿ ಅಮೆರಿಕಾದಲ್ಲಿನ ಕೋರ್ಟ್ ಆದೇಶ ಹೊರಡಿಸಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ