ಜಾರ್ಜಿಯಾದಲ್ಲಿ ಗವರ್ನರ್ ಹುದ್ದೆಗೆ ಏರಲಿರುವ ಮೊದಲ ಕಪ್ಪುವರ್ಣೀಯ ಮಹಿಳೆ ಯಾರು ಗೊತ್ತಾ....?

ಶುಕ್ರವಾರ, 25 ಮೇ 2018 (13:31 IST)
ಅಟ್ಲಾಂಟಾ : ಜಾರ್ಜಿಯಾದ ಗವರ್ನರ್ ಆಗಿ ವಕೀಲರಾದ ಸ್ಟೇಸಿ ಅಬ್ರಾಮ್ಸ್ ಅವರು ಆಯ್ಕೆಯಾಗಿದ್ದಾರೆ.


ಈ ಮೂಲಕ ಅವರು ಅಮೆರಿಕದ ಇತಿಹಾಸದಲ್ಲಿ ಜಾರ್ಜಿಯಾದಲ್ಲಿ ಈ ಹುದ್ದೆಗೆ ಏರಲಿರುವ ಮೊದಲ ಕಪ್ಪುವರ್ಣೀಯ ಮಹಿಳೆ ಎಂದೆನಿಸಿಕೊಳ್ಳಲಿದ್ದಾರೆ. ಹಲವು ಮಹಿಳೆಯರು ಈ ಹುದ್ದೆಯ ಮೇಲೆ ಕಣ್ಣಿಟ್ಟಿದ್ದು, ಅವರಲ್ಲಿ 44 ವರ್ಷ ವಯಸ್ಸಿನವರಾದ ಸ್ಟೇಸಿ ಅಬ್ರಾಮ್ಸ್ ಅವರನ್ನು ಡೆಮಾಕ್ರಟಿಕ್ ಪಕ್ಷದವರು ಆಯ್ಕೆ ಮಾಡಿಕೊಂಡಿದ್ದಾರೆ. ಮಂಗಳವಾರ ನಡೆದ ಪ್ರಾಥಮಿಕ ಚುನಾವಣೆಯಲ್ಲಿ ಸ್ಟೇಸಿ ಅಬ್ರಾಮ್ಸ್ ಅವರು ಸ್ಟೇಸಿ ಇವಾನ್ಸ್ ಅವರನ್ನು ಸೋಲಿಸಿ, ಗವರ್ನರ್ ಹುದ್ದೆಗೆ ನಾಮ ನಿರ್ದೇಶನಗೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ