ಮೊದಲ ಪಾಯಿಂಟ್‌ನಲ್ಲಿ ಬೆಳಗ್ಗೆಯಿಂದ ಮಣ್ಣು ಅಗೆದರು ಸಿಗದ ಕಳೆಬರಹ, ಧರ್ಮಸ್ಥಳ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್‌

Sampriya

ಮಂಗಳವಾರ, 29 ಜುಲೈ 2025 (15:21 IST)
ಧರ್ಮಸ್ಥಳ: ಶವಗಳನ್ನು ಹೂತಿಟ್ಟ ಪ್ರಕರಣದಲ್ಲಿ ಇಂದು ನೇತ್ರಾವತಿ ನದಿ ತಟದಲ್ಲಿ ದೂರುದಾರ ಗುರುತಿಸಿದ ಸ್ಥಳದಲ್ಲಿ ಉತ್ಖನನ ಮಾಡಿದರು ಇದುವರೆಗೆ ಯಾವುದೇ ಕಳೆಬರಹ ಸಿಕ್ಕಿಲ್ಲ. ಕಾರ್ಮಿಕರು ಮಣ್ಣು ಅಗೆದು ಸುಸ್ತಾದರು, ಯಾವುದೇ ಕಳೆಬರಹ ಪತ್ತೆಯಾಗಿಲ್ಲ. 

ಇದೀಗ ಅದೇ ಸ್ಥಳದಲ್ಲಿ ಇನ್ನೂ ಹೆಚ್ಚು ಮಣ್ಣು ತೆಗೆಯಲು ಮಿನಿ ಜೆಸಿಬಿಯನ್ನು ಕರೆತರಲಾಗಿದೆ.  ದೂರುದಾರನಿಗೆ ತೃಪ್ತಿ ಆಗುವವರೆಗೂ ಉತ್ಖನನ ಮಾಡಲಾಗುವುದು ಎಂದು ಎಸ್‌ಪಿ ಹೇಳಿದ್ದಾರೆ. 

ಧರ್ಮಸ್ಥಳದಲ್ಲಿ ಹಲವು ಶವಗಳನ್ನು ಹೂತಿಟ್ಟ ಪ್ರಕರಣ ಸಂಬಂಧ ನಿನ್ನೆ ದೂರುದಾರ ಗುರುತಿಸಿದ 13 ಸ್ಥಳಗಳಲ್ಲಿ ಇಂದು ಮೃತದೇಹಗಳ ಉತ್ಖನನ ಮಾಡಲಾಗುತ್ತಿದೆ. ದೂರುದಾರನ ಇರುವಿಕೆಯೊಂದಿಗೆ ಎಸ್‌ಐಟಿ ಅಧಿಕಾರಿಗಳು ಸ್ಥಳದಲ್ಲಿ ಉತ್ಖನನ ಮಾಡಿದ್ದಾರೆ. 

ಇಂದು ಬೆಳಗ್ಗೆಯಿಂದ ದೂರುದಾರ ಗುರುತಿಸಿದ ಒಂದು ಸ್ಥಳದಲ್ಲಿ ಕಾರ್ಮಿಕರು ಉತ್ಖನನ ಮಾಡಿದರು ಯಾವುದೇ ಕಳೆಬರಹ ಪತ್ತೆಯಾಗಿಲ್ಲ. ಇದೀಗ ದೂರುದಾರನಿಗೆ ಸಮಾಧಾನ ಆಗುವವರೆಗೂ ಉತ್ಖನನ ಮಾಡಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿದೆ. ಈ ಹಿನ್ನೆಲೆ ಸ್ಥಳಕ್ಕೆ ಮಿನಿ ಜೆಸಿಬಿಯನ್ನು ಕರೆತರಲಾಗಿದೆ. 


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ