ಕಳೆದ 10 ವರ್ಷಗಳಲ್ಲಿ ಸಲಿಂಗಿಗಳ ಹಕ್ಕುಗಳಿಗೆ ಸಂಬಂಧಿಸಿದಂತೆ ತೈವಾನ್‌ನಲ್ಲಿ ಭಾರಿ ಹೋರಾಟಗಳು ನಡೆದಿತ್ತು. ಸಲಿಂಗಿಗಳಿಗೆ ವಿವಾಹಕ್ಕೆ ಅವಕಾಶ ನೀಡದಿದ್ದರೆ ಸಂವಿಧಾನದ ಉಲ್ಲಂಘನೆಯಾಗಲಿದೆ ಎಂದು ಎರಡು ವರ್ಷಗಳ ಹಿಂದೆ ತೈವಾನ್‌ನ ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿತ್ತು. 2019ರ ಮೇ 24ರೊಳಗೆ ವಿವಾಹ ಕಾಯ್ದೆಗೆ ಸೂಕ್ತ ತಿದ್ದುಪಡಿ ತಂದು ಸಲಿಂಗ ವಿವಾಹ ಸಕ್ರಮ ಕಾನೂನು ರೂಪಿಸಲು ಸರಕಾರಕ್ಕೆ ಸೂಚಿಸಿತ್ತು.
ಅದರಂತೆ ಇದೀಗ ಸಲಿಂಗ ವಿವಾಹದ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಲು ಸರಕಾರ ನಡೆಸಿದ ಜನಮತದಲ್ಲಿ ಬಾರೀ ಪ್ರಮಾಣದ ಮತ ಬಂದಿದ್ದ ಹಿನ್ನಲೆಯಲ್ಲಿ ತೈವಾನ್ ಸರಕಾರ ಸಲಿಂಗ ವಿವಾಹಕ್ಕೆ ಒಪ್ಪಿಗೆ ಸೂಚಿಸಿದೆ. ಹಾಗೇ ಸಲಿಂಗಿಗಳು ತಮ್ಮ ವಿವಾಹವನ್ನು ಸರಕಾರದಲ್ಲಿ ನೋಂದಣಿ ಮಾಡಿಸಲು ಕೂಡ ಅವಕಾಶ ನೀಡಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.