ಈತನಿಗೆ ಮನೆಯಲ್ಲಿ ಸಿಂಹದ ಮರಿ ಸಾಕಲು ಅನುಮತಿ ನೀಡಿದೆ ಈ ಸರ್ಕಾರ
ಸೋಮವಾರ, 1 ಜುಲೈ 2019 (09:24 IST)
ನಾಟಿಂಗ್ ಹ್ಯಾಮ್: ಸಾಮಾನ್ಯವಾಗಿ ಕಾಡು ಪ್ರಾಣಿಗಳನ್ನು ಮನೆಯಲ್ಲಿ ಸಾಕಲು ಯಾರು ಒಪ್ಪುವುದಿಲ್ಲ. ಆದರೆ ವ್ಯಕ್ತಿಯೊಬ್ಬನಿಗೆ ಸಿಂಹದ ಮರಿಗಳನ್ನು ಮನೆಯಲ್ಲಿಟ್ಟು ಸಾಕಲು ಜೆಕ್ ಗಣರಾಜ್ಯ ಅನುಮತಿ ನೀಡಿದೆ.
ನಾಟಿಂಗ್ ಹ್ಯಾಮ್ ಶೈರ್ ನ ನಿವಾಸಿ, ರೀಸ್ ಆಲಿವರ್ ಎಂಬಾತನಿಗೆ ಎರಡು ಸಿಂಹದ ಮರಿಗಳು ಮತ್ತು ಪ್ಯೂಮ (ದೊಡ್ಡ ಬೆಕ್ಕು) ಸಾಕಲು ಅಲ್ಲಿನ ಸರ್ಕಾರ ಅನುಮತಿ ನೀಡಿದೆ. ಆದರೆ ಭಯದಿಂದ ಅಲ್ಲಿನ ಸ್ಥಳೀಯರು, ಸ್ಥಳೀಯ ಕೌನ್ಸಿಲ್ ಗೆ 14 ಆಕ್ಷೇಪಣೆಗಳನ್ನು ಸಲ್ಲಿಸಿದ್ದಾರೆ.
ಆದರೆ ಈ ಬಗ್ಗೆ ಧೃತಿಗೆಡದ ರೀಸ್ ಆಲಿವರ್ ಸಿಂಹಗಳ ರಕ್ಷಣೆಯ ಬಗ್ಗೆ ಸರಿಯಾದ ವಾದ ಮಂಡಿಸಿದ ಹಿನ್ನಲೆಯಲ್ಲಿ ಕೌನ್ಸಿಲ್ ನ ಇಬ್ಬರು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದರೂ, ಐದು ಜನ ಒಪ್ಪಿದ್ದರಿಂದ ಅನುಮತಿ ದೊರೆಯಿತು.