ವಿಸ್ಕಿ ಬಾಟಲನ್ನು ಮಾರಿ ಮನೆ ಖರೀದಿಸಲು ಮುಂದಾದ ವ್ಯಕ್ತಿ

ಶನಿವಾರ, 12 ಸೆಪ್ಟಂಬರ್ 2020 (10:14 IST)
ಸ್ಕಾಟ್ಲೆಂಡ್ : ತನ್ನ ಹುಟ್ಟುಹಬ್ಬಕ್ಕೆ ತಂದೆ ಗಿಫ್ಟ್ ಕೊಟ್ಟ ವಿಸ್ಕಿ ಬಾಟಲನ್ನು ಮಾರಿ ಮನೆ ಖರೀದಿಸಲು ವ್ಯಕ್ತಿಯೊಬ್ಬ ಮುಂದಾಗಿದ್ದಾನೆ.

ಸೋಮರ್ ಸೆಟ್ ನ ಮ್ಯಾಥ್ಯೂ ರಾಬಿನ್ಸ್ ತಂದೆ ಪೀಟ್ ವಿಸ್ಕಿ ಕಚ್ಚಾ ವಸ್ತುಗಳನ್ನು ತಯಾರಿಸುವ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ತನ್ನ ಮಗನ ಹುಟ್ಟುಹಬ್ಬದಂದು ಅವನಿಗೆ ಉಡುಗೊರೆಯಾಗಿ ವಿಸ್ಕಿ ಬಾಟಲ್ ಗಳನ್ನು ನೀಡುತ್ತಿದ್ದು ಹಾಗೇ ಅದನ್ನು ಬಳಸದಂತೆ ಸೂಚಿಸಿದ್ದರು.

28 ವರ್ಷಗಳಲ್ಲಿ ಪೀಟ್  ಆ ವಿಸ್ಕಿಗೆ  5ಸಾವಿರ ಡಾಲರ್( 4.77 ಲಕ್ಷ  ರೂ.) ಖರ್ಚು ಮಾಡಿದ್ದರು. ಆದರೆ ಅದರ ಬೆಲೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದರಿಂದ ಇದೀಗ ಅದರ ಬೆಲೆ  40ಸಾವಿರ ಡಾಲರ್( 38.17 ಲಕ್ಷ  ರೂ.)ಆಗಿದೆ ಎನ್ನಲಾಗಿದೆ. ಆದಕಾರಣ ಇವುಗಳನ್ನು ಮಾರಿದರೆ ಆತನಿಗೆ ಮನೆ ಖರೀದಿಸುವಷ್ಟು ಹಣ ಸಿಗುತ್ತದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ