ತನ್ನ ಮುಂಚಿನ ಸಂದರ್ಶನಗಳಲ್ಲಿ ತಾನು ತುಂಬಾ ರೋಗಗ್ರಸ್ಥೆಯಾಗಿದ್ದು, ನಡೆಯಲೂ ಆಗುತ್ತಿಲ್ಲ ಎಂದು ಮದರ್ ತೆರೇಸಾ ಭಾವಚಿತ್ರದೊಂದಿಗೆ ಕಂಡುಬಂದ ಬೆಸ್ರಾ ಹೇಳಿದ್ದರು. ಆಗಲೇ ಅವರಿಗೆ ಒಂದು ದಿವ್ಯ ಬೆಳಕು ಕಾಣಿಸಿತಂತೆ. ಆಗ ಕ್ರೈಸ್ತ ಸನ್ಯಾಸಿನಿಯರು ಬೆಸ್ರಾ ಹೊಟ್ಟೆಯ ಮೇಲೆ ಧಾರ್ಮಿಕ ಪದಕವನ್ನು ಒತ್ತಿದರು. ಬೆಸ್ರಾಗೆ ಕೆಲವು ಗಂಟೆಗಳ ಬಳಿಕ ಎಚ್ಚರವಾದಾಗ ಅವರು ಗುಣಮುಖಳಾಗಿದ್ದರು.