ಹೂ ಮಾರುತ್ತಿದ್ದ ಬಡ ಹುಡುಗಿಗೆ ಹೊಡೆದ ಆಟೋ ಚಾಲಕ: ಕರುಳು ಹಿಂಡುವ ಈ ವಿಡಿಯೋ ನೋಡಿ

Krishnaveni K

ಸೋಮವಾರ, 14 ಜುಲೈ 2025 (13:37 IST)
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಕೆಲವೊಂದು ವಿಡಿಯೋಗಳು ನಮ್ಮನ್ನು ಕಾಡುತ್ತವೆ. ಅಂತಹದ್ದೇ ವಿಡಿಯೋವೊಂದು ಈಗ ವೈರಲ್ ಆಗಿದೆ. ಇದರಲ್ಲಿ ಹೂಡ ಮಾರುತ್ತಿದ್ದ ಬಡ ಹುಡುಗಿಗೆ ಆಟೋ ಚಾಲಕನೊಬ್ಬ ಹೊಡೆದಿದ್ದಕ್ಕೆ ಆಕೆ ಅಳುತ್ತಿರುವ ದೃಶ್ಯ ಎಂತಹವರ ಕರುಳೂ ಹಿಂಡುವಂತಿದೆ.

ಬಡತನದಿಂದಲೋ ಅನಿವಾರ್ಯದಿಂದಲೋ ಕೆಲವೊಂದು ಮಕ್ಕಳು ಶಾಲೆಗೆ ಹೋಗಿ ಓದಿಕೊಂಡು ಅಪ್ಪ-ಅಮ್ಮನ ಬೆಚ್ಚನೆಯ ಆಸರೆಯಲ್ಲಿರಬೇಕಾದ ವಯಸ್ಸಿನಲ್ಲಿ ಕೆಲಸ ಮಾಡಬೇಕಾಗಿ ಬರುತ್ತಿದೆ. ಇದೇ ರೀತಿ ಹೂ ಮಾರುವ ಹುಡುಗಿಯೊಬ್ಬಳು ರಸ್ತೆಯಲ್ಲಿ ಹೂ ಮಾರುತ್ತಿದ್ದಳು.

ಹೀಗೇ ಮಾರಾಟ ಮಾಡುತ್ತಾ ಆಟೋವೊಂದನ್ನು ಹಿಂಬಾಲಿಸಿಕೊಂಡು ಹೂ ತೆಗೆದುಕೊಳ್ಳುವಂತೆ ಒತ್ತಾಯಿಸುತ್ತಾ ಓಡಿದ್ದಾಳೆ. ಇದಕ್ಕೆ ಆ ಆಟೋ ಚಾಲಕ ಹೊಡೆದಿದ್ದಾನಂತೆ. ಇದರಿಂದ ಬೇಸರಗೊಂಡ ಬಾಲಕಿ ರಸ್ತೆ ಬದಿ ಕೂತು ಅಳುತ್ತಿದ್ದಳು. ಇದನ್ನು ಗಮನಿಸಿ ಬೈಕ್ ವ್ಲಾಗರ್ ಶಿಖರ್ ಎಂಬವರು ಬೈಕ್ ನಿಲ್ಲಿಸಿ ಅಕೆಯನ್ನು ವಿಚಾರಿಸಿದ್ದಾರೆ.

ಆಟೋ ಹಿಂದೆ ಯಾಕೆ ಓಡಲು ಹೋದೆ? ಅದು ಅಪಾಯ ಅಲ್ವಾ? ಹೋಗ್ಲಿ ಬಿಡು ನಿಂಗೆ ನಾನು ದುಡ್ಡು ಕೊಡ್ತೀನಿ ಎಂದು ಅವರು ದುಡ್ಡು ಕೊಡಲು ಹೋದರೂ ಆ ಬಾಲಕಿ ನಿರಾಕರಿಸಿದ್ದಾಳೆ. ಈ ವಿಡಿಯೋವನ್ನು ವ್ಲಾಗರ್ ಶಿಖರ್ ಎಂಬವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದು ವೈರಲ್  ಆಗಿದೆ. ಸಾಕಷ್ಟು ಜನ ಕಾಮೆಂಟ್ ಮಾಡಿದ್ದು ಪರ-ವಿರೋಧ ಕಾಮೆಂಟ್ ಮಾಡಿದ್ದಾರೆ.

 
 
 
 
View this post on Instagram
 
 
 
 
 
 
 
 
 
 
 

A post shared by Shikhar Sahni (@ride_with_shikhar)

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ