ಹಿಂದೂ ವ್ಯಾಪಾರಿಯ ಕೊಂದು ಮೃತದೇಹದ ಮೇಲೆ ಡ್ಯಾನ್ಸ್ ಮಾಡಿದ ಹಂತಕರು

Krishnaveni K

ಸೋಮವಾರ, 14 ಜುಲೈ 2025 (10:50 IST)
ಢಾಕಾ: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದೌರ್ಜನ್ಯ ಮಿತಿ ಮೀರಿದೆ. ಹಿಂದೂ ವ್ಯಾಪಾರಿಯೊಬ್ಬನನ್ನು ಕೊಂದು ಆತನ ಮೃತದೇಹದ ಮೇಲೆ ಡ್ಯಾನ್ಸ್ ಮಾಡಿದ ಹೇಯ ಕೃತ್ಯ ನಡೆದಿದೆ ಎಂದು ವರದಿಯಾಗಿದೆ.

ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಅಧಿಕಾರ ಕಳೆದುಕೊಂಡು ಮಧ್ಯಂತರ ಸರ್ಕಾರ ಬಂದಾಗಿನಿಂದ ಹಿಂದೂಗಳ ಮೇಲಿನ ಹಿಂಸಾಚಾರ ಮಿತಿ ಮೀರಿದೆ. ಇದೀಗ ದುಷ್ಕರ್ಮಿಗಳು ಹಿಂದೂ ವ್ಯಾಪಾರಿಯನ್ನು ಥಳಿಸಿ ಕೊಂದಿದ್ದಲ್ಲದೆ ಆತನ ಮೃತದೇಹದ ಮೇಲೆ ಡ್ಯಾನ್ಸ್ ಮಾಡಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಘಟನೆ ಖಂಡಿಸಿ ದೇಶದಾದ್ಯಂತ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಬಾಲ್ ಚಂದ್ ಸೋಹಾಗ್ ಎಂಬ ವ್ಯಾಪಾರಿಯ ಮೇಲೆ ಸಿಮೆಂಟ್ ಇಟ್ಟಿಗೆಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ. ಹತ್ಯೆ ಬಳಿಕ ಮೃತದೇಹದ ಸುತ್ತ ಹಂತಕರು ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲೂ ಹರಿದಾಡಿತ್ತು. ಇದೀಗ ಘಟನೆ ಸಂಬಂಧ ಐವರನ್ನು ಬಂಧಿಸಲಾಗಿದ್ದು ಅವರಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ