72 ವರ್ಷಗಳ ಬಳಿಕ ಹಿಂದೂ ದೇಗುಲದ ಬಾಗಿಲು ತೆರೆಸಿದ ಪಾಕ್ ಸರ್ಕಾರ
ಬುಧವಾರ, 31 ಜುಲೈ 2019 (09:26 IST)
ಲಾಹೋರ್ : ಭಾರತ-ಪಾಕ್ ವಿಭಜನೆ ನಂತರ ಇದೆ ಮೊದಲ ಬಾರಿಗೆ ಲಾಹೋರ್ ನಲ್ಲಿದ್ದ ಹಿಂದೂ ದೇವಾಲಯವೊಂದರ ಬಾಗಿಲು ತೆರೆಯಲು ಪಾಕ್ ಸರ್ಕಾರ ಅನುಮತಿ ನೀಡಿದೆ ಎಂಬುದಾಗಿ ತಿಳಿದುಬಂದಿದೆ.
ಲಾಹೋರ್‌ನಿಂದ 100 ಕಿ.ಮೀ. ದೂರದಲ್ಲಿರುವ 'ಧಾರೊವಾಲ್' ಪ್ರದೇಶದಲ್ಲಿರುವ ಸುಮಾರು 1,000 ವರ್ಷ ಹಳೆಯ ಹಿಂದೂ ದೇಗುಲ 'ಶಾವ್ಲಾ ತೇಜ್ ಸಿಂಗ್' ನ್ನು ಸ್ಥಳೀಯ ಹಿಂದೂಗಳ ಮನವಿಯ ಮೇರೆಗೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸರಕಾರ ಬಾಗಿಲು ತೆರೆಸಿ ದರ್ಶನ ಹಾಗೂ ಪೂಜೆಗೆ ಅವಕಾಶ ಮಾಡಿಕೊಟ್ಟಿದೆ ಎನ್ನಲಾಗಿದೆ.
'ಧಾರೊವಾಲ್' ಪ್ರದೇಶದಲ್ಲಿ ಯಾವುದೇ ಹಿಂದೂಗಳ ನೆಲೆಸಿಲ್ಲದ ಕಾರಣ ಈ ದೇಗುಲವನ್ನು ಮುಚ್ಚಲಾಗಿತ್ತು. ಆದರೆ ಈಗ ಸುಮಾರು 2000 ಹಿಂದೂಗಳು ಅಲ್ಲಿ ನೆಲೆಸಿದ್ದಾರೆ. ಅವರ ಕೋರಿಕೆಯ ಮೇರೆಗೆ ಇದೀಗ ಈ ದೇಗುಲ ತೆರೆಯಲ್ಪಟ್ಟಿದ್ದು, ಇದು ಹಿಂದೂಗಳ ಸಂತಸಕ್ಕೆ ಕಾರಣವಾಗಿದೆ.