ಉಕ್ರೇನ್‌ಗೆ ಸಹಕಾರ ನೀಡುತ್ತೇವೆ ಎಂದ ಅಮೆರಿಕ

ಭಾನುವಾರ, 27 ಫೆಬ್ರವರಿ 2022 (07:14 IST)
ವಾಷಿಂಗ್ಟನ್ : ಉಕ್ರೇನ್ ಜೊತೆ ನಾವಿದ್ದೇವೆ ಎಂದು ಭಾಷಣ ಮೂಲಕ ಧೈರ್ಯ ತುಂಬಿದ್ದ ಅಮೆರಿಕದ ಅಧ್ಯಕ್ಷ ಜೋ ಬೈಡನ್ ತನ್ನ ಸೈನ್ಯವನ್ನು ಯಾಕೆ ಕಳುಹಿಸಿಲ್ಲ ಎಂಬ ವಿಚಾರ ಈಗ ಭಾರೀ ಚರ್ಚೆಗೆ ಕಾರಣವಾಗಿದೆ.

ತನ್ನ ಎದುರಾಳಿಯಿಂದ ಬೇರೊಂದು ದೇಶಕ್ಕೆ ಅಪಾಯವಾದಾಗ ಕೂಡಲೇ ಸೈನ್ಯವನ್ನು ಕಳುಹಿಸಿ ಬೆದರಿಕೆ ಹುಟ್ಟಿಸುತ್ತಿದ್ದ ವಿಶ್ವದ ದೊಡ್ಡಣ್ಣ ಅಮೆರಿಕ ರಷ್ಯಾ ಉಕ್ರೇನ್ ವಿಚಾರದಲ್ಲಿ ಬಹಳ ಎಚ್ಚರಿಕೆ ಹೆಜ್ಜೆಯನ್ನು ಇಡುತ್ತಿದೆ.

ಆರ್ಥಿಕವಾಗಿ ರಷ್ಯಾಗೆ ದಿಗ್ಭಂದನ ಹೇರಿದ ಅಮೆರಿಕ ಇಂದು 350 ಮಿಲಿಯನ್ ಡಾಲರ್ ನೆರವನ್ನು ಉಕ್ರೇನ್ಗೆ ನೀಡುವುದಾಗಿ ಘೋಷಿಸಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ