ರಷ್ಯಾ ವಿರುದ್ಧ ದೂರ ಉಳಿದ ಭಾರತ

ಶನಿವಾರ, 26 ಫೆಬ್ರವರಿ 2022 (11:41 IST)
ನವದೆಹಲಿ : ಉಕ್ರೇನ್ ವಿರುದ್ಧದ ರಷ್ಯಾ ಆಕ್ರಮಣವನ್ನು ಖಂಡಿಸುವ ಯುಎನ್ಎಸ್ಸಿ ನಿರ್ಣಯದಿಂದ ಭಾರತ ದೂರ ಉಳಿದಿದೆ.

ರಷ್ಯಾ ವಿರುದ್ಧ 11 ರಾಷ್ಟ್ರಗಳು ನಿರ್ಣಯಕ್ಕೆ ಒಪ್ಪಿಗೆ ಸೂಚಿಸಿದರೆ, ಭಾರತ ಸೇರಿ ಮೂರು ರಾಷ್ಟ್ರಗಳು ನಿರ್ಣಯದಿಂದ ದೂರ ಉಳಿದು ತಟಸ್ಥ ನೀತಿ ಅನುಸರಿಸಿವೆ.

ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ನಿರ್ಣಯ ಮಂಡಿಸಲಾಗಿತ್ತು. ಭಾರತ, ಚೀನಾ, ಯುಎಇ ಈ ಮೂರು ರಾಷ್ಟ್ರಗಳು ಯುಎನ್ಎಸ್ಸಿ ನಿರ್ಣಯದಿಂದ ದೂರು ಉಳಿದಿವೆ. ಆದರೆ 11 ರಾಷ್ಟ್ರಗಳು ರಷ್ಯಾ ವಿರುದ್ಧ ಮತ ಚಲಾಯಿಸಿವೆ. ಈ ವೇಳೆ ರಷ್ಯಾ ತನ್ನ ವಿಟೋ ಅಧಿಕಾರವನ್ನು ಬಳಸಿದೆ. 

ಅಮೆರಿಕ, ಅಲ್ಬೇನಿಯಾ ಸೇರಿದಂತೆ ಪೋಲ್ಯಾಂಡ್, ಇಟಲಿ, ಜರ್ಮನಿ, ಎಸ್ಟೋನಿಯಾ, ಲಕ್ಸೆಂಬರ್ಗ್, ಜರ್ಮನಿ ಸೇರಿದಂತೆ 11 ರಾಷ್ಟ್ರಗಳು ರಷ್ಯಾ ಆಕ್ರಮಣ ಖಂಡಿಸುವ ನಿರ್ಣಯಕ್ಕೆ ಒಪ್ಪಿಗೆ ಸೂಚಿಸಿವೆ.

ಉಕ್ರೇನ್ನಲ್ಲಿನ ಇತ್ತೀಚಿನ ಬೆಳವಣಿಗೆಗಳಿಂದ ಭಾರತವು ವಿಚಲಿತವಾಗಿದೆ. ಹಿಂಸಾಚಾರ ಮತ್ತು ಹಗೆತನವನ್ನು ತಕ್ಷಣವೇ ನಿಲ್ಲಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಬೇಕೆಂದು ನಾವು ಒತ್ತಾಯಿಸುತ್ತೇವೆ. ಕೇವಲ ಪರಿಹಾರಗಳಿಂದಾಗಿ ನಾವು ಮನುಷ್ಯ ಜೀವಗಳಿಗೆ ಬೆಲೆ ಕೊಡಲು ಸಾಧ್ಯವಿಲ್ಲ ಎಂದು Uಓ ರಾಯಭಾರದ ಭಾರತದ ಖಾಯಂ ಪ್ರತಿನಿಧಿ ಟಿ.ಎಸ್.ತಿರುಮೂರ್ತಿ ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ