ಗಂಡನ ಅತೀಯಾದ ಪ್ರೀತಿ ಸಹಿಸಲಾರದೇ ಕೋರ್ಟ್ ಮೊರೆ ಹೋದ ಹೆಂಡತಿ!

ಶುಕ್ರವಾರ, 23 ಆಗಸ್ಟ್ 2019 (11:55 IST)
ಅರಬ್ : ಗಂಡನ ಹಿಂಸೆ ತಾಳಲಾರದೆ ಡೈವರ್ಸ್ ಕೇಳುವ ಮಹಿಳೆಯರ ಬಗ್ಗೆ ಸಾಮಾನ್ಯವಾಗಿ ಕೇಳುತ್ತಿರುತ್ತೇವೆ. ಆದರೆ ಅರಬ್​ ಸಂಯುಕ್ತ ಸಂಸ್ಥಾನದಲ್ಲಿ ಮಹಿಳೆಯೊಬ್ಬಳು ಅತಿಯಾಗಿ ಪ್ರೀತಿಸುವ ಗಂಡನಿಂದ ಮುಕ್ತಿಬೇಕು ಎಂದು ಕೋರ್ಟ್ ಮೆಟ್ಟಿಲೇರಿದ ಘಟನೆ ನಡೆದಿದೆ.ಒಂದು ವರ್ಷದ ಹಿಂದೆ ಮದುವೆಯಾದ ಜೋಡಿ ಸುಖ ಸಂಸಾರ ನಡೆಸುತ್ತಿದ್ದು, ಪತಿ ತನ್ನ ಪತ್ನಿಯನ್ನು ಅತಿಯಾಗಿ ಪ್ರೀತಿಸುತ್ತಿದ್ದ. ಆಕೆ ಕಷ್ಟಪಡಬಾರದೆಂದು ಆಕೆಯನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುತ್ತದ್ದ. ಇದು ಪತ್ನಿಗೆ ಅತಿರೇಕ ವರ್ತನೆ ಎನಿಸಿದ್ದು, ಇಂತಹ ಪತಿಯಿಂದ ನನಗೆ ವಿಚ್ಛೇದನ ನೀಡಿ ಎಂದು ಅರಬ್​ ಸಂಯುಕ್ತ ಸಂಸ್ಥಾನದ ಶಾರ್ಜಾ ಕೋರ್ಟ್​ ಮೊರೆ ಹೋಗಿದ್ದಾಳೆ ಎಂದು ಅಲ್ಲಿನ ಪತ್ರಿಕೆ ವರದಿ ಮಾಡಿದೆ.

 

ಆದರೆ ಈ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್, ಮದುವೆಯಾದ ಹೊಸದರಲ್ಲಿ ಇಂತಹ ತಪ್ಪುಗಳು ಆಗುವುದು ಸಹಜ. ಇದನ್ನು ನೀವೆ ಕುಳಿತು ಬಗೆಹರಿಸಿಕೊಳ್ಳಿ ಎಂದು ಆದೇಶಿಸಿದೆ ಎನ್ನಲಾಗಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ