ವಿಯೆಟ್ನಾಂದಲ್ಲಿ ಕಾರ್ಖಾನೆ ಮಾಲೀಕರೊಬ್ಬರು ಮಾಡಿದ ಖತರನಾಕ್ ಕೆಲಸವೇನು ಗೊತ್ತೇ?

ಸೋಮವಾರ, 28 ಸೆಪ್ಟಂಬರ್ 2020 (09:18 IST)
ವಿಯೆಟ್ನಾ : 2020ರ ವರ್ಷ ಬಹಳ ಸಂಕಷ್ಟವನ್ನು ತಂದೊಡ್ಡಿದೆ ಎಂಬುದಕ್ಕೆ ವಿಯೆಟ್ನಾಂದಲ್ಲಿ ನಡೆದ ಈ ಘಟನೆಯೇ ಮುಖ್ಯ ನಿರ್ದಶನವಾಗಿದೆ.

ವಿಯೆಟ್ನಾಂದ ಕಾರ್ಖಾನೆಯೊಂದರಲ್ಲಿ ಬಳಕೆ ಮಾಡಿದ ಕಾಂಡೋಮ್ ಗಳನ್ನು ಮರುಬಳಕೆಗಾಗಿ ಮಾರಾಟ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಕಳೆದ ವಾರ ಬಿನ್ಹ್ ಡುವಾಂಗ್ ಪ್ರಾಂತ್ಯದ ಮಾರುಕಟ್ಟೆ ತನಿಖಾಧಿಕಾರಿಗಳು ವಿಯೆಟ್ನಾಂದ ಕಾರ್ಖಾನೆಯೊಂದರ ಮೇಲೆ ದಾಳಿ ಮಾಡಿ 3,00,000ಕ್ಕೂ ಹೆಚ್ಚು ಬಳಸಿದ ಕಾಂಡೊಮ್ ಗಳನ್ನು ವಶಪಡಿಸಿಕೊಂಡಿದ್ದಾರಂತೆ

ಕಾರ್ಖಾನೆ ಮಾಲೀಕರು ಅಪರಿಚಿತ ವ್ಯಕ್ತಿಯೊಬ್ಬರಿಂದ ಅದನ್ನು ಖರೀದಿಸಿ ಬಳಿಕ ಅವುಗಳನ್ನು ತೊಳೆದು, ಪ್ಯಾಕ್ ಮಾಡಲು ಮುಂದಾಗಿದ್ದರು ಎಂಬುದಾಗಿ ಒಪ್ಪಿಕೊಂಡಿದ್ದಾರೆ. ಇಂತಹ ಕಾಂಡೋಮ್ ಗಳಿಂದ ತೀವ್ರ ಆರೋಗ್ಯ ಸಮಸ್ಯೆ ಉಂಟಾಗಬಹುದೆಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ