ಆಹಾರವೇ ಸಾವಾದಾಗ: ಮುಳ್ಳುಹಂದಿಯನ್ನು ನುಂಗಿ ಸಾವನ್ನಪ್ಪಿದ ಹೆಬ್ಬಾವು

ಶುಕ್ರವಾರ, 26 ಜೂನ್ 2015 (12:37 IST)
ಹೆಬ್ಬಾವುಗಳು ನಾಯಿ, ಕುರಿ ಇವೇ ಮುಂತಾದ ಪ್ರಾಣಿಗಳನ್ನು ತಿಂದು ಅರಗಿಸಿಕೊಳ್ಳುವುದು ಸಾಮಾನ್ಯ. ಆದರೆ ಸಿಕ್ಕಿತೆಂದು ಮುಳ್ಳು ಹಂದಿಯನ್ನೇ ತಿಂದುಬಿಟ್ಟರೆ. ಏನಾದೀತು ಹೇಳಿ? ಆ ಹೆಬ್ಬಾವಿನ ಜತೆ ಆಗಿದ್ದು ಅದೇ.

ಭಾರೀ ಗಾತ್ರದ ಹೆಬ್ಬಾವೊಂದು ಆಹಾರವಾಗಿ ಮುಳ್ಳುಹಂದಿಯನ್ನು ನುಂಗಿದ ಪ್ರತಿಫಲವಾಗಿ ಪ್ರಾಣವನ್ನೇ ಕಳೆದುಕೊಂಡಿರುವ ಘಟನೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ. 
 
ಎಲ್ಯಾಂಡ್ ಗೇಮ್ ರಿಸರ್ವ್ ಪ್ರದೇಶದಲ್ಲಿರುವ ಕೆರೆಯ ಬಳಿ 4 ಮೀಟರ್ ಉದ್ದದ ಹೆಬ್ಬಾವೊಂದು ಮುಳ್ಳುಹಂದಿಯನ್ನೂ ನುಂಗಿ ಅದರ ಜತೆ ತಾನು ಕೂಡ ಕೊನೆಯುಸಿರೆಳೆದಿದೆ.
 
ಮುಳ್ಳು ಹಂದಿಯೇನೋ 13 ಕೆಜಿಯದಾಗಿತ್ತು. ಆದರೆ ಅದರ ಚೂಪಾದ ಮುಳ್ಳುಗಳು ಹಾವಿನ ಹೊಟ್ಟೆ, ಬಾಯಿಗೆ ಚುಚ್ಚಿ ಅದರ ದೇಹವೆಲ್ಲ ಸೀಳಿ ಹೋಗಿದೆ. ತೀವೃ ಗಾಯ ಮತ್ತು ರಕ್ತಸ್ರಾವವಾದ್ದರಿಂದ ಹಾವು ಕೊನೆಯುಸಿರೆಳೆದಿದೆ.
 
ರಕ್ತಸಿಕ್ತವಾಗಿ ಸತ್ತು ಬಿದ್ದಿರುವ ಹಾವಿನ ಹೊಟ್ಟೆಯನ್ನು ಸೀಳಿ ನೋಡಲಾಗಿ ಅದು ಮುಳ್ಳುಹಂದಿಯನ್ನು ಸ್ವಾಹಾ ಮಾಡಿದ್ದಕ್ಕೆ ಹೀಗಾಗಿದೆ ಎಂಬ ಸತ್ಯ ಬೆಳಕಿಗೆ ಬಂದಿದೆ. 

ವೆಬ್ದುನಿಯಾವನ್ನು ಓದಿ