Gold Price: ಪರಿಶುದ್ಧ ಚಿನ್ನದ ಬೆಲೆ ಇಂದು ಮತ್ತಷ್ಟು ಇಳಿಕೆ

Krishnaveni K

ಶನಿವಾರ, 21 ಜೂನ್ 2025 (12:19 IST)
ಬೆಂಗಳೂರು: ದಾಖಲೆಯ ಬೆಲೆ ಏರಿಕೆ ಕಂಡಿರುವ ಚಿನ್ನದ ಬೆಲೆ ಇಂದು ಸತತ ಎರಡನೇ ದಿನ ಕೊಂಚ ಮಟ್ಟಿಗೆ ಇಳಿಕೆಯಾಗಿದ್ದು ಗ್ರಾಹಕರ ಮೊಗದಲ್ಲಿ ಸಮಾಧಾನ ಮೂಡಿದೆ. ಆದರೆ ಇಳಿಕೆಯಾಗಿದ್ದು ಪರಿಶುದ್ಧ ಚಿನ್ನದ ದರ ಮಾತ್ರ ಎನ್ನುವುದು ಗಮನಿಸಬೇಕಾದ ಅಂಶ. ಇತರೆ ಚಿನ್ನದ ಬೆಲೆ ಮತ್ತೆ ಏರಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ.

ಚಿನ್ನದ ದರ ಏರಿಕೆ
ಚಿನ್ನದ ಬೆಲೆ ಕಳೆದ ಒಂದು ವಾರದಿಂದ ಲಕ್ಷವನ್ನು ಮೀರಿ ನಿಂತಿದೆ. ಆದರೆ ಕಳೆದ ಎರಡು ದಿನಗಳಿಂದ ಕೊಂಚವೇ ಇಳಿಕೆಯಾಗುತ್ತಿರುವುದು ಸಮಾಧಾನಕರ ಸಂಗತಿಯಾಗಿದೆ. ಇಂದು ಕೊಂಚ ಮಟ್ಟಿಗೆ ಇಳಿಕೆಯಾದರೂ ಬೆಲೆ ಮಾತ್ರ ಇನ್ನೂ ಲಕ್ಷವನ್ನೂ ಮೀರಿಸಿದೆ. ನಿನ್ನೆ ಪರಿಶುದ್ಧ ಚಿನ್ನದ ದರ 1,02, 270.00 ರೂ.ಗಳಷ್ಟಿತ್ತು. ಇಂದು ಕೊಂಚ ಏರಿಕೆಯಾಗಿದ್ದು 1,01, 570.00 ರೂ.ಗಳಿಗೆ ಬಂದು ನಿಂತಿದೆ.

22 ಮತ್ತು 24, 18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಮತ್ತೆ ಏರಿಕೆಯಾಗಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 27 ರೂ. ಏರಿಕೆಯಾಗಿದ್ದು 10,075 ರೂ.ಗಳಷ್ಟಿದೆ.  24 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 25 ರೂ. ಏರಿಕೆಯಾಗಿದ್ದು 9,235 ರೂ.ಗಳಾಗಿವೆ. 18 ಕ್ಯಾರೆಟ್ ಚಿನ್ನದ ಬೆಲೆ  ಪ್ರತೀ ಗ್ರಾಂ.ಗೆ 20 ರೂ. ಇಳಿಕೆಯಾಗಿದ್ದು 7,556 ರೂ.ಗಳಷ್ಟಿದೆ.


ಬೆಳ್ಳಿ ದರ
ಬೆಳ್ಳಿ ದರದಲ್ಲೂ ಕಳೆದ ಕೆಲವು ದಿನಗಳಿಂದ ದಾಖಲೆಯ ಬೆಲೆ ಏರಿಕೆಯಾಗಿತ್ತು. ಆದರೆ ಇಂದು ಯಥಾಸ್ಥಿತಿಯಲ್ಲಿದೆ. ನಿನ್ನೆ ಬೆಳ್ಳಿ ದರ ಪ್ರತೀ ಕೆ.ಜಿ.ಗೆ 2000 ರೂ.ಗಳಷ್ಟು ಇಳಿಕೆಯಾಗಿ 1,10, 000 ರೂ. ಗಳಾಗಿತ್ತು. ಇಂದೂ ಅದೇ ದರವಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ