Tik tok ಅಲ್ಲ ಈಗ TickTock: ಮತ್ತೆ ಭಾರತಕ್ಕೆ ಕಾಲಿಡಲು ಹೊಸಾ ರೂಪದಲ್ಲಿ ಸಜ್ಜಾಗುತ್ತಿದೆ ಚೈನಾ ಆ್ಯಪ್
ಮಂಗಳವಾರ, 20 ಜುಲೈ 2021 (20:20 IST)
ಸಣ್ಣ, ಸಣ್ಣ ವೀಡಿಯೊ ತುಣುಕುಗಳ ಮೂಲಕ ಹಾಗೂ ಆ ವಿಡಿಯೋ ತುಣುಕಿಗೆ ಜನರು ಅಭಿನಯಿಸಿ ತಮ್ಮ ಅಭಿನಯಾ ಕೌಶಲವನ್ನು ಸೋಷಿಯಲ್ ಮೀಡಿಯಾದಲ್ಲೂ ತೋರಿಸಬಹುದು ಎನ್ನುವ ವಿಚಾರದಲ್ಲಿ ಕ್ರಾಂತಿ ಉಂಟು ಮಾಡಿದ ಅಪ್ಲಿಕೇಶನ್ ಎಂದರೆ ಟಿಕ್ಟಾಕ್ ಎನ್ನಬುಹುದು.
ಸಣ್ಣ ಮಕ್ಕಳಿಂದ ಹಿಡಿದು ವಯೋವೃದ್ದರು ಕೂಡ ಟಿಕ್ಟಾಕ್ ಬಳಸುತ್ತಿದ್ದರು. ಇವರಿಗೆ ಏಕಾಏಕಿ ಕೇಂದ್ರ ಸರ್ಕಾರ ವೈಯಕ್ತಿಕ ಭದ್ರತೆಯ ನೆಪವೊಡ್ಡಿ 59 ಚೈನೀಸ್ ಅಪ್ಲಿಕೇಶನ್ಗಳ ಬ್ಯಾನ್ ಮಾಡಿತ್ತು, ಮೊದಲನೇ ಹಂತದ ಈ ಬ್ಯಾನ್ ಮಾಡಿದ ಪಟ್ಟಿಯಲ್ಲಿ ಇದ್ದ ಹೆಸರು ಟಿಕ್ಟಾಕ್ ಕಿರು ವೀಡಿಯೊ ಅಪ್ಲಿಕೇಶನ್. ಆರಂಭಿಕ 59 ಅಪ್ಲಿಕೇಶನ್ಗಳಾದ ಜನಪ್ರಿಯ ಆ್ಯಪ್ಗಳಾದ ಶೀನ್, ಶೇರಿಟ್, ಇಎಸ್ ಫೈಲ್ ಎಕ್ಸ್ಪ್ಲೋರರ್ ಮತ್ತು ಇನ್ನಿತರೇ ಆ್ಯಪ್ಗಳನ್ನು ಐಟಿ ಕಾಯ್ದೆ ಮತ್ತು ಐಟಿ ನಿಯಮಗಳು 2008 ರ ಸೆಕ್ಷನ್ 69 ರ ನಿಬಂಧನೆಗಳ ಅಡಿಯಲ್ಲಿ ನಿರ್ಬಂಧಿಸಲಾಗಿತ್ತು.
ಈಗ ಮತ್ತೆ ಟಿಕ್ಟಾಕ್ ಭಾರತಕ್ಕೆ ಕಾಲಿಡುತ್ತಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.
Tik tok ಅಪ್ಲಿಕೇಶನ್ ಭಾರತದಲ್ಲಿ TickTock ಆಗಿ ಮರು-ಪ್ರಾರಂಭವಾಗಬಹುದು, ಕೇವಲ ಒಂದೆರಡು ಅಕ್ಷರಗಳನ್ನು ಬದಲಾಯಿಸಿಕೊಂಡು ಮತ್ತೆ ಕಾಲಿಡಲಿದೆ ಎನ್ನುವ ಸುಳಿವು ಸಿಕ್ಕಿದೆ. ಹೊಸ ಟ್ರೇಡ್ಮಾರ್ಕ್ ಪಡೆಯಲು ಅರ್ಜಿ ಸಲ್ಲಿಸಿರುವುದು ಈ ಸುಳಿವು ನೀಡಿದೆ. ಈ ವಿಚಾರವನ್ನು ಟಿಪ್ಸ್ ಗುರು ಮುಕುಲ್ ಶರ್ಮಾ ಅವರು ಟ್ವೀಟ್ ಮಾಡಿದ್ದಾರೆ, ಟಿಕ್ಟಾಕ್ನ ಮೂಲ ಸಂಸ್ಥೆ ಬೈಟ್ಡ್ಯಾನ್ಸ್ ಈ ತಿಂಗಳ ಆರಂಭದಲ್ಲಿ ಕಂಟ್ರೋಲರ್ ಜನರಲ್ ಆಫ್ ಪೇಟೆಂಟ್, ಡಿಸೈನ್ಸ್ ಮತ್ತು ಟ್ರೇಡ್ ಮಾರ್ಕ್ಸ್ನೊಂದಿಗೆ ಮತ್ತೆ ಭಾರತಕ್ಕೆ ಕಾಲಿಡಲು ಅರ್ಜಿ ಸಲ್ಲಿಸಿದೆ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ ಕೇಂದ್ರ ಸರ್ಕಾರವು ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆ, ಭಾರತದ ರಕ್ಷಣೆ, ರಾಜ್ಯ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಮಾರಕವಾದಂತಹ ಹಾಗೂ ಪೂರ್ವಾಗ್ರಹ ಪೀಡಿತವಾದ ಚಟುವಟಿಕೆಗಳು ಇರುವ ಆ್ಯಪ್ಗಳನ್ನು ಬ್ಯಾನ್ ಮಾಡಿತ್ತು. ಪ್ರಸಿದ್ದ ಪಬ್ಜಿ ಎನ್ನುವ ಮೊಬೈಲ್ ಗೇಮ್ ಅನ್ನು ಕೂಡ ಬ್ಯಾನ್ ಮಾಡಿತ್ತು ಆದರೆ ಈ ಆ್ಯಪ್ ಮತ್ತೆ ಬ್ಯಾಟಲ್ಗ್ರೌಂಡ್ಸ್ ಮೊಬೈಲ್ ಇಂಡಿಯಾ (ಬಿಜಿಎಂಐ) ಆಗಿ ಎಲ್ಲರ ಮೊಬೈಲ್ ಸೇರಿದೆ.
ಜುಲೈ 6 ರಂದು ಟಿಕ್ಟಾಕ್ ಟ್ರೇಡ್ಮಾರ್ಕ್ ಅಪ್ಲಿಕೇಶನ್ ಸಲ್ಲಿಸಿದೆ ಎಂದು ಹೇಳಲಾಗಿದೆ. ಮತ್ತು ತಾನು ನೀಡುವ ಸೇವೆಯ ವಿವರಣೆಯನ್ನು ಹೀಗೆ ವಿವರಿಸಿದೆ “ಮಲ್ಟಿಮೀಡಿಯಾ ಮನರಂಜನಾ ವಿಷಯಗಳನ್ನು ಹೋಸ್ಟಿಂಗ್ ಮಾಡುವುದು, ಮಲ್ಟಿಮೀಡಿಯಾ ಮತ್ತು ಸಂವಾದಾತ್ಮಕ ಅಪ್ಲಿಕೇಶನ್ಗಳ ಹೋಸ್ಟ್ ಮಾಡುವುದು” ಎಂದು ತಾನು ನೀಡಿರುವ ವಿವರದಲ್ಲಿ ಬರೆಯಲಾಗಿದೆ. ಇದರ ಹೊರತಾಗಿ, ಅದರ ಸಂಭವನೀಯ ಲಾಭದ ಬಗ್ಗೆ ಯಾವುದೇ ವಿವರಗಳಿಲ್ಲ. ಜುಲೈ ತಿಂಗಳ ಕೊನೆಗೆ ಕಂಪೆನಿ ತನ್ನ ಕಾರ್ಯಾಚರಣೆಯನ್ನು ಭಾರತದಲ್ಲಿ ಪ್ರಾರಂಭಿಸಲು ಅತ್ಯಂತ ಉತ್ಸುಕವಾಗಿದೆ ಎಂದು ಬೈಟ್ಡ್ಯಾನ್ಸ್ ಕಂಪೆನಿಯ ಮೂಲಗಳು ದಿ ಪ್ರಿಂಟ್ ವೆಬ್ಸೈಟ್ಗೆ ಮಾಹಿತಿ ನೀಡಿವೆ.ಹೊಸ ಅಪ್ಲಿಕೇಶನ್ ಬರುತ್ತದೆ ಮೋದಿ ಸರ್ಕಾರದ ಹೊಸ ಐಟಿ ನಿಯಮಗಳು ಮತ್ತು ಬಿಡೆನ್ ಆಡಳಿತವು "ಚೀನೀ ಅಪ್ಲಿಕೇಶನ್ಗಳ ಸುರಕ್ಷತೆಯನ್ನು ಪರಿಶೀಲಿಸಲು ನಿರ್ಧರಿಸಿದೆ, ಅವುಗಳನ್ನು ಸಂಪೂರ್ಣವಾಗಿ ನಿಷೇಧಿಸುವ ಬದಲು" ಕಾರ್ಯಾಚರಣೆಯನ್ನು ಪುನರಾರಂಭಿಸಲು ಕಂಪನಿಯು ಉತ್ಸುಕವಾಗಿದೆ ಎಂದು ಬೈಟ್ಡ್ಯಾನ್ಸ್ ಮೂಲವು ಪ್ರಿಂಟ್ಗೆ ತಿಳಿಸಿದೆ. ಮೋದಿ ಸರ್ಕಾರ ಮತ್ತು ಅಮೇರಿಕಾದ ಬಿಡೆನ್ ಆಡಳಿತದ ಹೊಸ ಐಟಿ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯಾಚರಣೆಯನ್ನು ಪುನರಾರಂಭಿಸಲು ಕಂಪನಿಯು ಉತ್ಸುಕವಾಗಿದೆ “ಚೀನೀ ಅಪ್ಲಿಕೇಶನ್ಗಳನ್ನು ಸಂಪೂರ್ಣವಾಗಿ ನಿಷೇಧಿಸುವ ಬದಲು ಅವರ ಸುರಕ್ಷತೆಯನ್ನು ಪರಿಶೀಲಿಸಲು ನಿರ್ಧರಿಸಿದೆ.”ಜೂನ್ ಆರಂಭದಲ್ಲಿ, ಟಿಕ್ ಟಾಕ್ ಮತ್ತು ವೀಚಾಟ್ ಮೇಲಿನ ಡೊನಾಲ್ಡ್ ಟ್ರಂಪ್ ಯುಗದ ನಿಷೇಧವನ್ನು ರದ್ದುಪಡಿಸುವ ಕಾರ್ಯನಿರ್ವಾಹಕ ಆದೇಶಕ್ಕೆ ಯುಎಸ್ ಅಧ್ಯಕ್ಷರು ಸಹಿ ಹಾಕಿದರು. ಇದಕ್ಕೂ ಮುನ್ನ, ಟಿಕ್ ಟಾಕ್ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಲು ವಿಫಲರಾಗಿದ್ದರು, ಮತ್ತು ಕಂಪನಿಯು ತನ್ನ ಬ್ಯಾಂಕ್ ಖಾತೆಗಳಂತೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಬೇಕಾಯಿತು.
ಇದೆಲ್ಲವನ್ನು ಗಮನಿಸಿದರೆ, ಈ ಎಲ್ಲಾ ಬೆಳವಣಿಗೆಗಳು ಆರಂಭಿಕ ಹಂತದಲ್ಲಿದೆ ಎಂದು ತೋರುತ್ತದೆ, ಮತ್ತು ಚೀನಾ ಮೂಲದ ಕಂಪೆನಿಯಾಗಿರುವ ಕಾರಣ ನಮ್ಮ ಭಾರತದ ಭದ್ರತಾ ನಿಯಮಗಳನ್ನು ಒಪ್ಪಿಕೊಳ್ಳಬೇಕು ಅಥವಾ ಅದರಿಂದ ಹೇಗೆ ತಪ್ಪಿಸಿಕೊಂಡು ಮತ್ತೆ ಕಾರ್ಯಾಚರಣೆ ಶುರು ಮಾಡುತ್ತದೆ ಎನ್ನುವುದಕ್ಕೆ ಪರಿಹಾರವನ್ನು ಬೈಟ್ಡ್ಯಾನ್ಸ್ ಕಂಡುಹಿಡಿಯಬೇಕು. ಮೊಬೈಲ್ ಗೇಮ್ ಅಪ್ಲಿಕೇಶನ್ ಪಬ್ ಜಿ ಡೆವಲಪರ್ ದಕ್ಷಿಣ ಕೊರಿಯಾದ ಕ್ರಾಫ್ಟನ್ ಹಲವಾರು ಬಾರಿ ಒಂದೇ ಮಾತನ್ನು ಪುನರುಚ್ಚರಿಸಿದ್ದು, ಚೀನಾ ಮೂಲದ ಟೆನ್ಸೆಂಟ್ನೊಂದಿಗೆ ಕಂಪನಿಯು ಯಾವುದೇ ಸಂಬಂಧವನ್ನು ನಾನು ಉಳಿಸಿಕೊಂಡಿಲ್ಲ ಎಂದು.
PUBG ಗಿಂತ ಬಹಳ ಸೀಮಿತವಾದ ಅಂಶಗಳನ್ನು ಹೊಂದಿರುವ ಬ್ಯಾಟಲ್ಗ್ರೌಂಡ್ ಇಂಡಿಯಾ ಗೇಮ್ ಪಬ್ಜಿಯಷ್ಟು ಪ್ರಸಿದ್ದವಾಗಲೂ ಇನ್ನೂ ತಿಣುಕಾಡುತ್ತಿದೆ ಅಲ್ಲದೇ, ಈಗ ಭಿನ್ನ ರೂಪದಲ್ಲಿ ಭಾರತಕ್ಕೆ ಕಾಲಿಡುತ್ತಿರುವ ಟಿಕ್ಟಾಕ್ ಮತ್ತೆ ಭಾರತದಲ್ಲಿ ತನ್ನ ಜನಪ್ರಿಯತೆಯನ್ನು ಮರಳಿ ಪಡೆಯಲು ಹೆಣಗಾಡಬೇಕಾಗುತ್ತದೆ ಅಲ್ಲದೇ ಈಗಾಗಲೇ ಸಾಕಷ್ಟು ಪ್ರತಿಸ್ಪರ್ಥಿಗಳು ಹುಟ್ಟಿಕೊಂಡಿದ್ದು ಅವರೆಲ್ಲರನ್ನು ಮೀರಿ ಇದು ಮುಂದಕ್ಕೆ ಹೋಗಬೇಕಾಗಿದೆ. ಟಿಕ್ಟಾಕ್ ಬ್ಯಾನ್ ಆದ ಮೇಲೆ ಎಂಎಕ್ಸ್ ಟಕಾಟಕ್ ಮತ್ತು ಚಿಂಗರಿಯಂತಹ ಆ್ಯಪ್ಗಳು ಸಾಕಷ್ಟು ಪ್ರಸಿದ್ದಿಯಾಗಿದ್ದವು ಅಲ್ಲದೇ ಈಗ ಜನಪ್ರತಿಯ ಕಿರು ವಿಡಿಯೋ ಆ್ಯಪ್ಗಳಾಗಿ ಸಾಕಷ್ಟು ಹೆಸರು ಮಾಡಿವೆ. ಬೆಳೆಯುತ್ತಿರುವ ಕಿರು-ರೂಪದ ವೀಡಿಯೊ ಮಾರುಕಟ್ಟೆಯನ್ನು ತನ್ನ ಕಡೆ ಸೆಳೆಯಲು ಇನ್ಸ್ಟಾಗ್ರಾಮ್ ಕಳೆದ ವರ್ಷ ರೀಲ್ಸ್ ಅನ್ನುವ ಹೊಸಾ ಆಯ್ಕೆಯನ್ನು ಪರಿಚಯಿಸಿತ್ತು. ಇದು ಸೆಲೆಬ್ರಿಟಿಗಳ ನಡುವೆ ಸಾಕಷ್ಟು ಪ್ರಸಿದ್ದಿ ಪಡೆದಿದೆ