ನಾಳೆ ಸೂರ್ಯಗ್ರಹಣ! ಎಲ್ಲೆಲ್ಲಿ ಗೋಚರವಾಗಲಿದೆ?

ಬುಧವಾರ, 14 ಫೆಬ್ರವರಿ 2018 (09:57 IST)
ನವದೆಹಲಿ: ಮೊನ್ನೆಯಷ್ಟೇ ಅಪರೂಪದ ಚಂದ್ರಗ್ರಹಣಕ್ಕೆ ಸಾಕ್ಷಿಯಾದ ಜನ ನಾಳೆ ಸೂರ್ಯ ಗ್ರಹಣಕ್ಕೆ ಸಾಕ್ಷಿಯಾಗಲಿದ್ದಾರೆ.
 

ಆದರೆ ಈ ಗ್ರಹಣ ಭಾರತದಲ್ಲಿ ಗೋಚರವಾಗದು. ಅಂಟಾರ್ಟಿಕಾ, ಅಟ್ಲಾಂಟಿಕ್ ಸಮುದ್ರ ದಕ್ಷಿಣ ಭಾಗ, ದ.ಅಮೆರಿಕಾದಲ್ಲಿ ಈ ಗ್ರಹಣ ಗೋಚರವಾಗಲಿದೆ. ಭಾಗಶಃ ಸೂರ್ಯಗ್ರಹಣ ಗೋಚರವಾಗುವುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.

ನಾಳೆ ನಡೆಯುವ ಗ್ರಹಣ ಸುಮಾರು 2 ಗಂಟೆಗಳಷ್ಟು ಸುದೀರ್ಘ ಕಾಲ ಗೋಚರವಾಗಬಹುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಇದೇ ವರ್ಷ ಅಗಸ್ಟ್ ನಲ್ಲಿ ಇನ್ನೊಂದು ಸೂರ್ಯ ಗ್ರಹಣ ಸಂಭವಿಸಲಿದ್ದು ಅದೂ ಭಾರತದಲ್ಲಿ ಗೋಚರವಿರುವುದಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ