ವಾಷಿಂಗ್ಟನ್ : 2020ರ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಸೋಲು ಕಂಡ ಬಳಿಕ ಮತದಾನದ ಯಂತ್ರಗಳನ್ನು ವಶಪಡಿಸಿಕೊಳ್ಳಲು ತಮ್ಮ ಕರಡು ಕಾರ್ಯನಿರ್ವಾಹಕ ಆದೇಶದಲ್ಲಿ ರಕ್ಷಾಣಾ ಕಾರ್ಯದರ್ಶಿಗೆ ಸೂಚಿಸಿದ್ದ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.
ಹೌದು, ಹೊಸದಾಗಿ ಬಿಡುಗಡೆಯಾದ ನ್ಯಾಶನಲ್ ಆರ್ಕೈವ್ ದಾಖಲೆಯ ಪ್ರಕಾರ ಜೋ ಬೈಡೆನ್ರನ್ನು ಅಧ್ಯಕ್ಷರೆಂದು ಘೋಷಿಸುವುದನ್ನು ತಡೆಯಲು ಡೊನಾಲ್ಡ್ ಟ್ರಂಪ್ ಕೈಗೊಂಡಿದ್ದ ಒಂದು ಕ್ರಮ ಬಹಿರಂಗವಾಗಿದೆ.
2020ರ ಡಿಸೆಂಬರ್ 16ರಂದು ಚುನಾವಣಾ ದಾಖಲೆ ಸಂರಕ್ಷಣೆಗೆ ಸಂಬಂಧಿಸಿದ ಕಾನೂನಿನ ಅಡಿಯಲ್ಲಿ ಯಂತ್ರಗಳು, ಉಪಕರಣಗಳು, ಎಲೆಕ್ಟ್ರಾನಿಕ್ ಸಂಗ್ರಹದ ಮಾಹಿತಿ ಹಾಗೂ ದಾಖಲೆಗಳನ್ನು ವಶಪಡಿಸಿಕೊಳ್ಳಲು ರಕ್ಷಣಾ ಕಾರ್ಯದರ್ಶಿಗೆ ಆದೇಶಿಸಲಾಗಿತ್ತು.
ಈ ಕರಡು ಆದೇಶವು 700 ಪುಟಗಳ ಟ್ರಂಪ್ ಅವರ ಅಧ್ಯಕ್ಷೀಯ ದಾಖಲೆಯಲ್ಲಿ ದೊರಕಿದೆ. ಇದನ್ನು ನ್ಯಾಶನಲ್ ಆರ್ಕೈವ್ಸ್ ಮತ್ತು ರೆಕಾರ್ಡ್ಸ್ ಅಡ್ಮಿನಿಸ್ಟ್ರೇಶನ್ ಯುಎಸ್ ಹೌಸ್ ಸಮಿತಿಗೆ ಬಿಡುಗಡೆ ಮಾಡಿದೆ.