ಭೀಕರ ಭೂಕಂಪದಿಂದಾಗಿ ನಲುಗಿರುವ ಟರ್ಕಿ!

ಗುರುವಾರ, 9 ಫೆಬ್ರವರಿ 2023 (08:31 IST)
ಬೆಂಗಳೂರು : ಭೀಕರ ಭೂಕಂಪದಿಂದಾಗಿ ನಲುಗಿರುವ ಟರ್ಕಿ ಹಾಗೂ ಸಿರಿಯಾ ದೇಶಗಳಲ್ಲಿ ಇಲ್ಲಿಯವರೆಗೆ ಸಾವಿನ ಸಂಖ್ಯೆ 15 ಸಾವಿರಕ್ಕೆ ಏರಿಕೆಯಾದೆ.
 
ಈ ನಡುವೆ ಟರ್ಕಿಯಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಕರ್ನಾಟಕ ಸರ್ಕಾರ ಮುಂದಾಗಿದೆ. ಟರ್ಕಿ, ಸಿರಿಯಾ ಅವಘಡದಲ್ಲಿ ಸಿಲುಕಿದ ಕನ್ನಡಿಗರ ರಕ್ಷಣೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ನೋಡೆಲ್ ಅಧಿಕಾರಿಗಳನ್ನ ನೇಮಕ ಮಾಡಲಾಗಿದೆ. ಟರ್ಕಿ, ಸಿರಿಯಾ ರಾಯಭಾರ ಕಚೇರಿಗಳೊಂದಿಗೆ ಸಂಪರ್ಕಿಸಿ ಕನ್ನಡಿಗರ ಮಾಹಿತಿ ಪಡೆಯಲು ಸರ್ಕಾರದಿಂದ ಸೂಚನೆ ನೀಡಿದೆ.

ಸುಮಾರು 3,000 ಭಾರತೀಯರು ಟರ್ಕಿಯಲ್ಲಿ ವಾಸವಿದ್ದು, ಅವರಲ್ಲಿ 75 ಜನರು ಸಹಾಯವನ್ನು ಕೋರಿ ಕರೆ ಮಾಡಿರುವುದಾಗಿ ಸಚಿವಾಲಯ ತಿಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ