ಅಂಡಮಾನ್ ಸಮುದ್ರದಲ್ಲಿ ತೀವ್ರತೆಯ ಭೂಕಂಪ

ಮಂಗಳವಾರ, 31 ಜನವರಿ 2023 (08:21 IST)
ಪೋರ್ಟ್ ಬ್ಲೇರ್ : ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿರುವ ಅಂಡಮಾನ್ ಸಮುದ್ರದಲ್ಲಿ ಮಂಗಳವಾರ 4.9 ತೀವ್ರತೆಯ ಭೂಕಂಪ ಸಂಭವಿಸಿರುವುದಾಗಿ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.

ಭೂಕಂಪ ಮುಂಜಾನೆ 3:40 ರ ವೇಳೆಗೆ ಸಂಭವಿಸಿದೆ. ಇದರ ಕೇಂದ್ರ ಬಿಂದುವನ್ನು 77 ಕಿ.ಮೀ ಆಳದಲ್ಲಿ ಗುರುತಿಸಲಾಗಿದೆ ಎಂದು ಎನ್ಸಿಎಸ್ ತಿಳಿಸಿದೆ. ಸದ್ಯ ಇಲ್ಲಿಯವರೆಗೆ ಯಾವುದೇ ಹಾನಿ ನಡೆದಿರುವ ಬಗ್ಗೆ ವರದಿಯಾಗಿಲ್ಲ.

ಎನ್ಸಿಎಸ್ ಪ್ರಕಾರ ರಿಕ್ಟರ್ ಮಾಪಕದಲ್ಲಿ 5.8 ತೀವ್ರತೆಯ ಭೂಕಂಪ ಸಂಭವಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ