ಕಿವ್ : ಮಹತ್ವದ ಬೆಳವಣಿಗೆಯಲ್ಲಿ ನ್ಯಾಟೋ ಸದಸ್ಯತ್ವಕ್ಕೆ ನಾವು ಪಟ್ಟು ಹಿಡಿಯುವುದಿಲ್ಲ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಜೆಲೆನ್ಸ್ಕಿ ಹೇಳಿದ್ದಾರೆ.
ಉಕ್ರೇನ್ನಿಂದ ಸ್ವಾಯತ್ತೆ ಬಯಸುತ್ತಿರುವ ಎರಡು ರಷ್ಯಾ-ಪರ ಪ್ರದೇಶಗಳ ವಿಷಯದಲ್ಲಿ ರಾಜಿ ಮಾಡಿಕೊಳ್ಳಲು ನಾನು ಸಿದ್ಧನಿದ್ದೇನೆ ಎಂದು ಮಂಗಳವಾರ ರಾತ್ರಿ ಪ್ರಕಟಿಸಿದ್ದಾರೆ.
ರಷ್ಯಾ ವಿಧಿಸಿದ್ದ 4 ಪ್ರಮುಖ ಷರತ್ತುಗಳಲ್ಲಿ ಎರಡನ್ನು ಉಕ್ರೇನ್ ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಈಗ ಯುದ್ಧ ಅಂತ್ಯವಾಗುತ್ತಾ ಎಂಬ ಪ್ರಶ್ನೆ ಎದ್ದಿದೆ.
ನಮ್ಮನ್ನು ನ್ಯಾಟೋ ಒಪ್ಪಿಕೊಳ್ಳಲು ತಯಾರಿಲ್ಲ. ರಷ್ಯಾ ವಿರುದ್ಧ ಯುದ್ಧ ಮಾಡಿ ಅಪಾಯ ತಂದುಕೊಳ್ಳಲು ನ್ಯಾಟೋಗೆ ಇಷ್ಟವಿಲ್ಲ. ರಷ್ಯಾ ವಿರುದ್ಧ ಯುದ್ಧ ಮಾಡಲು ನ್ಯಾಟೋ ಹೆದರುತ್ತದೆ. ಹೀಗಾಗಿ ನ್ಯಾಟೋ ಕುರಿತ ನಮ್ಮ ನಿಲುವಿನಿಂದ ನಾವು ಹಿಂದಕ್ಕೆ ಸರಿದಿದ್ದೇವೆ ಎಂದು ಎಬಿಸಿ ನ್ಯೂಸ್ಗೆ ನೀಡಿದ ಸಂದರ್ಶನದಲ್ಲಿ ಜೆಲೆನ್ಸ್ಕಿ ತಿಳಿಸಿದ್ದಾರೆ.