ಕೀವ್ : ವಿಶ್ವವನ್ನೇ ಬೆಚ್ಚಿ ಬಿಳಿಸುವಂತೆ ಮಾಡಿರುವ ರಷ್ಯಾ ಹಾಗೂ ಉಕ್ರೇನ್ ಯುದ್ಧ ಪ್ರಾರಂಭವಾಗಿ 100 ದಿನಗಳು ಕಳೆದಿವೆ.
ಈ ವೇಳೆ ಸಿವಿರೋಡೋನೆಟ್ಸ್ಕ್ಗಾಗಿ ನಡೆದ ಯುದ್ಧದಲ್ಲಿ ದೊಡ್ಡ ಪ್ರಮಾಣದ ಭೂಪ್ರದೇಶವನ್ನು ಉಕ್ರೇನ್ ಪುನಃ ವಶಪಡಿಸಿಕೊಂಡಿದೆ. ಈ ಮೂಲಕ ರಷ್ಯಾ ಸೈನ್ಯದ ಪ್ರಯತ್ನವನ್ನು ಉಕ್ರೇನ್ ವಿಫಲಗೊಳಿಸಿದೆ.
ಸಾಕಷ್ಟು ಸಾವು ನೋವಿಗೆ ಕಾರಣವಾಗಿರುವ ಹಾಗೂ ಇಡೀ ವಿಶ್ವದ ಮೇಲೆಯೇ ಆರ್ಥಿಕ ಮತ್ತು ಇತರೆ ದುಷ್ಪರಿಣಾಮ ಬೀರಿರುವ ಉಕ್ರೇನ್ನ ಮೇಲಿನ ರಷ್ಯಾ ಆಕ್ರಮಣಕ್ಕೆ ಶುಕ್ರವಾರ 100 ದಿನ ಪೂರ್ಣಗೊಂಡಿತ್ತು. ಇದರ ಬೆನ್ನಲ್ಲೇ ಉಕ್ರೇನ್ ರಷ್ಯಾವನ್ನು ಕೀವ್ನಿಂದ ಹಿಂದಕ್ಕೆ ಓಡಿಸಿದೆ.
ಅಷ್ಟೇ ಅಲ್ಲದೇ ಉಕ್ರೇನಿಯನ್ ಪಡೆಗಳು ಸಿವಿರೋಡೋನೆಟ್ಸ್ಕ್ನಲ್ಲಿ ರಷ್ಯಾದ ಪಡೆಗಳಿಂದ ಕಳೆದುಕೊಂಡಿದ್ದ ಸುಮಾರು 20% ಪ್ರದೇಶವನ್ನು ಪುನಃ ವಶಪಡಿಸಿಕೊಂಡಿವೆ.
ಉಕ್ರೇನ್ ಮತ್ತು ರಷ್ಯಾ ಯುದ್ಧದಿಂದಾಗಿ ಜಾಗತಿಕವಾಗಿ ಆಹಾರ ಬೆಲೆಗಳ ಮೇಲೆ ಪರಿಣಾಮ ಬೀರುತ್ತಿದೆ ಹಾಗೂ ಇದರಿಂದಾಗಿ ಬಡ ರಾಷ್ಟ್ರಗಳಿಗೆ ಹಾನಿಯಾಗುತ್ತದೆ ಎಂಬ ವಿದೇಶಗಳ ಟೀಕೆಯನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಈಗಾಗಲೇ ತೀರಸ್ಕರಿಸಿದ್ದಾರೆ.