ವಿಶ್ವ ಪಾರಂಪರಿಕ ನಗರ ಪಟ್ಟಿಗೆ ಅಹ್ಮದಾಬಾದ್ ಸೇರ್ಪಡೆ: ಯುನೆಸ್ಕೋ

ಭಾನುವಾರ, 9 ಜುಲೈ 2017 (17:34 IST)
ಅಹ್ಮದಾಬಾದ್:ಅಹಮದಾಬಾದ್‌ ಭಾರತದ ಮೊದಲ ವಿಶ್ವ ಪಾರಂಪಾರಿಕ ನಗರ ಪಟ್ಟಿಗೆ ಸೇರ್ಪಡೆಗೊಂಡಿದೆ. ಯುನೆಸ್ಕೋದ ವಿಶ್ವ ಪಾರಂಪರಿಕ ಸಮಿತಿಯ 41ನೇ ಅಧಿವೇಶನದಲ್ಲಿ ಈ ಘೋಷಣೆ ಮಾಡಲಾಗಿದೆ. 
 
2010ರಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು  ಅಹ್ಮದಾಬಾದ್ ಅನ್ನು ವಿಶ್ವ ಪಾರಂಪರಿಕ ನಗರಿ ಪಟ್ಟಿಗೆ ಸೇರ್ಪಡೆ ಮಾಡಬೇಕು ಎಂದು ಪ್ರಸ್ತಾವನೆ ಕಳುಹಿಸಿದ್ದರು. ಸುದೀರ್ಘ ಸಭೆ ಮತ್ತು ಚರ್ಚೆಗಳ ಬಳಿಕ ಕೊನೆಗೂ ಅಹ್ಮದಾಬಾದ್ ಅನ್ನು ವಿಶ್ವ ಪರಂಪರೆ ನಗರ ಪಟ್ಟಿಗೆ  ಸೇರ್ಪಡೆಗೊಳಿಸಲಾಗಿದೆ ಎಂದು ಯುನೆಸ್ಕೋದ ಭಾರತ ಶಾಶ್ವತ ಪ್ರತಿನಿಧಿ ರುಚಿರಾ ಕಂಬೋಜ್ ತಿಳಿಸಿದ್ದಾರೆ. ಅಹ್ಮದಾಬಾದ್ ನ ನಾಮನಿರ್ದೇಶನವನ್ನು 20 ದೇಶಗಳು ಬೆಂಬಲಿಸಿವೆ.
 
ಈ ಪಟ್ಟಿಯಲ್ಲಿ ಈಗಾಗಲೇ ಪ್ಯಾರಿಸ್, ವಿಯೆನ್ನಾ, ಕೈರೋ, ಬ್ರಸೆಲ್ಸ್, ರೋಮ್ ಮತ್ತು ಎಡಿನ್ಬರ್ಗ್ ನಗರ, ಎರಿಟ್ರಿಯಾ ರಾಜಧಾನಿ ಅಸ್ಮರಾ ನಗರ ಹಾಗೂ ನೇಪಾಳದ ಭಕ್ತಪುರ ಮತ್ತು ಶ್ರೀಲಂಕಾದ ಗಾಲೆ ಕೂಡ ವಿಶ್ವಪರಂಪರೆ ನಗರಗಳ ಪಟ್ಟಿಗೆ ಸೇರ್ಪಡೆಯಾಗಿದೆ.  

ವೆಬ್ದುನಿಯಾವನ್ನು ಓದಿ