ನೈಸರ್ಗಿಕ ವಿಕೋಪಗಳು ದೇಶಕ್ಕೆ ಎದುರಾದ ಪರೀಕ್ಷೆ: 125ನೇ ಮನ್‌ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ

Sampriya

ಭಾನುವಾರ, 31 ಆಗಸ್ಟ್ 2025 (12:14 IST)
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು 125ನೇ ಮನ್‌ ಕಿ ಬಾತ್‌ನಲ್ಲಿ ಭಾನುವಾರ ಮಾತನಾಡಿ,  ಉತ್ತರಭಾರತದಲ್ಲಿ ಸಂಭವಿಸಿದ ಪ್ರವಾಹ ಮತ್ತು ಭೂಕುಸಿತದಿಂದ ನಾನು ತೀವ್ರ ದುಃಖಿತನಾಗಿದ್ದೇನೆ ಎಂದು ಹೇಳಿದ್ದಾರೆ. 

ವಿಪತ್ತುಗಳಿಂದಾಗಿ ಜೀವಗಳು, ಮನೆಗಳು ಮತ್ತು ಮೂಲಸೌಕರ್ಯಗಳ ನಷ್ಟದ ಬಗ್ಗೆ ದುಃಖ ವ್ಯಕ್ತಪಡಿಸಿದ ಅವರು, ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌ ಮತ್ತು ಇತರ ಭದ್ರತಾ ಸಿಬ್ಬಂದಿಯ ಕೆಲಸವನ್ನು ಶ್ಲಾಘಿಸಿದರು. 

ಮುಂಗಾರು ಋತುವಿನಲ್ಲಿ, ನೈಸರ್ಗಿಕ ವಿಕೋಪಗಳು ದೇಶವನ್ನು ಪರೀಕ್ಷಿಸುತ್ತಿವೆ, ಕಳೆದ ಕೆಲವು ವಾರಗಳಲ್ಲಿ, ಪ್ರವಾಹ ಮತ್ತು ಭೂಕುಸಿತದಿಂದ ಉಂಟಾದ ಭಾರಿ ಹಾನಿಯನ್ನು ನಾವು ನೋಡಿದ್ದೇವೆ. ಮನೆಗಳು ಛಿದ್ರವಾಯಿತು, ಹೊಲಗಳು ಮುಳುಗಿದವು ಎಂದು ಹೇಳಿದರು.

ಇಡೀ ಕುಟುಂಬಗಳು ನಾಶವಾದವು, ನಿರಂತರ ನೀರಿನ ಪ್ರವಾಹವು ಸೇತುವೆಗಳು-ರಸ್ತೆಗಳು ಕೊಚ್ಚಿಹೋಗಿವೆ, ಮತ್ತು ಪ್ರತಿ ಕುಟುಂಬಗಳು ತಮ್ಮ ಜೀವನವನ್ನು ಕಳೆದುಕೊಂಡು ದುಃಖಿತವಾದ ಘಟನೆಗಳನ್ನು ಹಂಚಿಕೊಂಡಿದ್ದಾರೆ ಎಂದು ಹೇಳಿದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ