ಮಹಿಳೆಯರಿಗೆ ವಿಶ್ವವಿದ್ಯಾಲಯ ತೆರೆದ ತಾಲಿಬಾನ್

ಗುರುವಾರ, 3 ಫೆಬ್ರವರಿ 2022 (13:48 IST)
ಕಾಬೂಲ್ : ಅಫ್ಘಾನಿಸ್ತಾನದ 34 ಪ್ರಾಂತ್ಯಗಳ ಪೈಕಿ 6 ಪ್ರಾಂತ್ಯಗಳಲ್ಲಿ ಮಹಿಳಾ ವಿದ್ಯಾರ್ಥಿಗಳಿಗೆ ಸಾರ್ವಜನಿಕ ವಿಶ್ವವಿದ್ಯಾಲಯಗಳನ್ನು ತೆರೆಯಲಾಗಿದೆ ಎಂದು ತಾಲಿಬಾನ್ ಬುಧವಾರ ತಿಳಿಸಿದೆ.
 
ಕಳೆದ ವರ್ಷ ಆಗಸ್ಟ್ನಲ್ಲಿ ತಾಲಿಬಾನ್ ಅಫ್ಘಾನಿಸ್ತಾನನ್ನು ವಶಪಡಿಸಿಕೊಂಡ ಬಳಿಕ ತಮ್ಮ ಆಳ್ವಿಕೆಯಲ್ಲಿ ದೇಶಾದ್ಯಂತ ಕಠಿಣ ಕ್ರಮಗಳನ್ನು ವಿಧಿಸುತ್ತಿದೆ. ಮುಖ್ಯವಾಗಿ ಹುಡುಗಿಯರನ್ನು ಶಿಕ್ಷಣದಿಂದ ಹಾಗೂ ಮಹಿಳೆಯರನ್ನು ಸಾರ್ವಜನಿಕ ಜೀವನ ಮತ್ತು ಕೆಲಸದಿಂದ ವಂಚಿಸುತ್ತಲೇ ಇದೆ.

ತಾಲಿಬಾನ್ ವಿಧಿಸಿರುವ ನಿರ್ಬಂಧಗಳಲ್ಲಿ ಹೆಚ್ಚಿನವು ಮಹಿಳೆಯರ ಮೇಲೆ ಪ್ರಭಾವ ಬೀರುತ್ತದೆ. ಮಹಿಳೆಯರನ್ನು ಆರೋಗ್ಯ ಹಾಗೂ ಬೋಧನಾ ವಲಯಗಳನ್ನು ಹೊರತು ಪಡಿಸಿ ಇತರ ಉದ್ಯೋಗಗಳಿಂದ ನಿರ್ಬಂಧಿಸಿದೆ.

ಹುಡುಗಿಯರು 6ನೇ ತರಗತಿಯ ಬಳಿಕ ಶಾಲೆಗೆ ಹೋಗಲು ಸಾಧ್ಯವಾಗುತ್ತಿಲ್ಲ. ಜೊತೆಗೆ ಮಹಿಳೆಯರಿಗೆ ಹಿಜಬ್ ಧರಿಸಲು ಒತ್ತಾಯಿಸುತ್ತಿದೆ. ಆದರೆ ಬುರ್ಖಾ ಹೇರಿಕೆಯ ಬಗ್ಗೆ ಸ್ವಲ್ಪ ವಿರಾಮ ದೊರಕಿದೆ. 

ತಾಲಿಬಾನ್ ಸಂಸ್ಕೃತಿ ಹಾಗೂ ಮಾಹಿತಿ ಸಚಿವಾಲಯ ಬುಧವಾರ ತಿಳಿಸಿರುವ ಮಾಹಿತಿಯ ಪ್ರಕಾರ ನಂಗರ್‌ಹಾರ್, ಕಂದಹಾರ್, ಹೆಲ್ಮಂಡ್, ಫರಾಹ್, ನಿಮ್ರೋಜ್ ಹಾಗೂ ಲಗ್ಮನ್ ಪ್ರಾಂತ್ಯಗಳಲ್ಲಿ ಸಾರ್ವಜನಿಕ ವಿಶ್ವವಿದ್ಯಾಲಯಗಳನ್ನು ಮಹಿಳೆಯರಿಗೂ ತೆರೆಯಲಾಗಿದೆ ಎಂದು ತಿಳಿಸಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ