ವಾಷಿಂಗ್ಟನ್ : ಭವಿಷ್ಯದ ಭಯೋತ್ಪಾದನಾ ಬೆದರಿಕೆಗಳನ್ನು ನಿಯಂತ್ರಿಸಲು ಎಫ್-16 ಫೈಟರ್ ಜೆಟ್ ಪಡೆಯ ಸುಸ್ಥಿರ ಕಾರ್ಯಕ್ರಮದ ಅಡಿಯಲ್ಲಿ ಪಾಕಿಸ್ತಾನಕ್ಕೆ 3,500 ಕೋಟಿ (450 ಮಿಲಿಯನ್ ಡಾಲರ್) ಮೊತ್ತದ ಸೇನಾ ನೆರವು ನೀಡುವುದಾಗಿ ಅಮೆರಿಕ ಘೋಷಿಸಿದೆ.
2018ರಲ್ಲಿ ತಾಲಿಬಾನ್ ಮತ್ತು ಹಕ್ಕಾನಿ ಉಗ್ರ ಸಂಘಟನೆಗಳನ್ನು ಹತ್ತಿಕ್ಕಲು ವಿಫಲವಾದ ಪಾಕಿಸ್ತಾನಕ್ಕೆ ಅಂದಿನ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 15,000 ಕೋಟಿ ನೆರವನ್ನು ತಡೆಹಿಡಿದಿದ್ದರು. ಅದಾದ ಬಳಿಕ ಪಾಕ್ಗೆ ಅಮೆರಿಕ ನೀಡುತ್ತಿರುವ ಮೊದಲ ನೆರವು ಇದಾಗಿದೆ.
ಇದು ಪಾಕಿಸ್ತಾನ ಅಮೆರಿಕ ದ್ವಿಪಕ್ಷಿಯ ಸಂಬಂಧದ ಭಾಗವಾಗಿದ್ದು, ಭಯೋತ್ಪಾದನೆ ನಿಗ್ರಹಕ್ಕೆ ಎಫ್-16 ಸಹಾಯಕವಾಗಲಿದೆ. ಈ ನೆರವಿನ ಅಡಿಯಲ್ಲಿ ಯಾವುದೇ ಸಾಮರ್ಥ್ಯದ ಶಸ್ತ್ರಾಸ್ತ್ರ ಯುದ್ಧ ಸಾಮಗ್ರಿಗಳನ್ನು ಒಳಗೊಂಡಿಲ್ಲ ಎಂದು ಅಮೆರಿಕ ವಿದೇಶಾಂಗ ಸಚಿವಾಲಯ ತಿಳಿಸಿದೆ.