ವಾಗ್ದಂಡನೆಗೆ ಗುರಿಯಾದ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಭಾನುವಾರ, 15 ಡಿಸೆಂಬರ್ 2019 (06:49 IST)
ವಾಷಿಂಗ್ಟನ್ : ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ವಾಗ್ದಂಡನೆಗೆ ಗುರಿಪಡಿಸಲು ಅಮೇರಿಕ ಸಂಸತ್ ನ ನ್ಯಾಯಾಂಗ ಸಮಿತಿ ಅನುಮತಿ ನೀಡಿದೆ.
ಟ್ರಂಪ್ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದು, ಡೆಮೋಕ್ರೆಟಿಕ್ ಪಕ್ಷದ ಜೋ ಬಿಡೆನ್ ವಿರುದ್ಧ ತನಿಖೆ ನಡೆಸಲು ಉಕ್ರೈನ್ ಮೇಲೆ ಒತ್ತಡ ಹೇರಿದ್ದಾರೆಂಬ ಆರೋಪದಡಿ ಅಮೇರಿಕ ಸಂಸತ್ ನ ನ್ಯಾಯಾಂಗ ಸಮಿತಿ ಈ ನಿರ್ಧಾರ ಕೈಗೊಂಡಿದೆ. ಈ ಮೂಲಕ ಡೊನಾಲ್ಡ್ ಟ್ರಂಪ್ ಅಮೇರಿಕಾದ ರಾಜಕೀಯದಲ್ಲಿ ವಾಗ್ದಂಡನೆಗೆ ಗುರಿಯಾದ 3ನೇ ಅಧ್ಯಕ್ಷರಾಗಲಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಟ್ರಂಪ್ ನೇತೃತ್ವದ ರಿಪಬ್ಲಿಕನ್ ಪಕ್ಷದ ಸದಸ್ಯರು , 2016ರ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಗೆಲುವು ಸಾಧಿಸಿರುವುದನ್ನು ಸಹಿಸಲಾಗದೆ ಈ ಆರೋಪ ಮಾಡಿದ್ದಾರೆ ಎಂದು ಡೆಮೋಕ್ರೆಟಿಕ್ ಪಕ್ಷದವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.