ಮಲೇರಿಯಾ ಔಷಧಿ ಸಿಕ್ಕ ಕೂಡಲೇ ವರಸೆ ಬದಲಿಸಿದ ಅಮೆರಿಕಾ

ಗುರುವಾರ, 9 ಏಪ್ರಿಲ್ 2020 (09:41 IST)
ನವದೆಹಲಿ: ಕೊರೋನಾಗೆ ಭಾರತದಿಂದ ಮಲೇರಿಯಾ ಔಷಧಿ ಪಡೆಯಲು ಮೊದಲು ಬೆದರಿಕೆ ತಂತ್ರಕ್ಕೆ ಮೊರೆ ಹೋಗಿದ್ದ ಅಮೆರಿಕಾ ಅಧ‍್ಯಕ್ಷ ಡೊನಾಲ್ಡ್ ಟ್ರಂಪ್ ಈಗ ವರಸೆ ಬದಲಿಸಿದ್ದಾರೆ.


ಭಾರತ ಮಲೇರಿಯಾಗೆ ಬಳಸುವ ಹೈಡ್ರೋಕ್ಸಿಕ್ಲೋರೋಕ್ವಿನ್ ಔಷಧಿಯನ್ನು ರಫ್ತು ಮಾಡಲು ಇರುವ ನಿರ್ಬಂಧ ತೆರವುಗೊಳಿಸಲು ಅಮೆರಿಕಾ ಸೇರಿದಂತೆ ಅಗತ್ಯವಿರುವ ರಾಷ್ಟ್ರಗಳಿಗೆ ಔಷಧಿ ರವಾನಿಸಲು ಒಪ್ಪಿಗೆ ನೀಡುತ್ತಿದ್ದಂತೇ ಅಮೆರಿಕಾ ಅಧ‍್ಯಕ್ಷರ ವರಸೆ ಬದಲಿದೆ.

‘ಮೋದಿ ಉತ್ತಮ ಮನುಷ್ಯ. ಭಾರತ ಒಳ್ಳೆಯ ಮಿತ್ರ’ ಎಂದು ಟ್ರಂಪ್ ಹಾಡಿ ಹೊಗಳಿದ್ದಾರೆ. ಇದೀಗ ಭಾರತದಲ್ಲಿ ತಯಾರಾಗುವ ಮಲೇರಿಯಾ ಔಷಧಗಳಿಗೆ ವಿಶ್ವದ ನಾನಾ ರಾಷ್ಟ್ರಗಳು ಬೇಡಿಕೆಯಿಟ್ಟಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ