ಇಡ್ಲಿ, ವಡೆಗೆ ಬೇರೆ ಹೆಸರಿಟ್ಟು ಮಾರಾಟ ಮಾಡಿದ ಅಮೆರಿಕಾ ರೆಸ್ಟೋರೆಂಟ್ ಗೆ ಭಾರತೀಯರ ತಪರಾಕಿ
ದಕ್ಷಿಣ ಭಾರತದ ಜನಪ್ರಿಯ ತಿಂಡಿಗಳಾದ ಇಡ್ಲಿ, ವಡೆ, ಸಾಂಬಾರ್, ದೋಸೆಗೆ ತಮ್ಮದೇ ಹೆಸರಿಟ್ಟು ಇಂಡಿನಯ್ ಕ್ರೀಪ್ ಕೊ. ಎಂಬ ರೆಸ್ಟೋರೆಂಟ್ ಮಾರಾಟ ಮಾಡಿದೆ.
ಇದನ್ನು ಗಮನಿಸಿದ ಭಾರತೀಯರು ಟ್ವಿಟರ್ ನಲ್ಲಿ ಈ ರೆಸ್ಟೋರೆಂಟ್ ನ್ನು ಇನ್ನಿಲ್ಲದಂತೆ ಟ್ರೋಲ್ ಮಾಡಿದ್ದಾರೆ. ನಮ್ಮ ತಿಂಡಿಗಳ ರೆಸಿಪಿ ಕದ್ದು ಬೇರೆ ಹೆಸರಲ್ಲಿ ಮಾರಾಟ ಮಾಡುತ್ತಿದ್ದೀರಾ ಎಂದು ಈ ತಿಂಡಿಗಳ ನಿಜ ಹೆಸರುಗಳನ್ನು ಬರೆದು ರೆಸ್ಟೋರೆಂಟ್ ನವರ ಬೆವರಿಳಿಸಿದ್ದಾರೆ.