ಬೆಂಗಳೂರಿನ ಅಶೋಕ ಹೋಟೆಲ್ ಅಲ್ಲಿ ಫ್ಯಾಶನ್ ಶೋ
ಫ್ಯಾಷನ್ ಅಂದ್ರೆ ಚಿಕ್ಕ ಮಕ್ಳಿಂದ ಹಿಡ್ದು, ದೊಡ್ಡವ್ರ ತನ್ಕಾ ಎಲ್ರೂ ಇಷ್ಟಪಡ್ತಾರೆ. ಈಗ ಮಾರುಕಟ್ಟೆಯಲ್ಲಂತೂ ಫ್ಯಾಷನ್ ಟ್ರೆಂಡ್ ಕಾಲಕ್ಕೆ ತಕ್ಕಂತೆ ಬದಲಾಗ್ತಿದೆ. ಅದ್ರಲ್ಲೂ ಯುವಜನರು ಹೆಚ್ಚು ಫ್ಯಾಷನ್ ಡಿಸೈನಿಂಗ್ನತ್ತ ಗಮನ ಹರಿಸ್ತಾರೆ. ಅಂದಹಾಗೆ ಬೆಂಗಳೂರಿನ ಲಲಿತ್ ಅಶೋಕ್ ಹೋಟೆಲ್ ನಲ್ಲಿ ನಡೆದ ಮಿಸೆಸ್ ಸೌತ್ ಇಂಡಿಯಾ ಫ್ಯಾಶನ್ ಶೋ ಎಲ್ಲರ ಗಮನವನ್ನು ಸೆಳೆಯಿತು. ವಿಶೇಷ ವಸ್ತ್ರಗಳನ್ನ ವಿನ್ಯಾಸಗೊಳಿಸಿ ಫ್ಯಾಷನ್ ಶೋ ಮೂಲಕ ಪ್ರದರ್ಶನ ಮಾಡಿದ್ರು. ಖಾಸಗಿ ಕಲ್ಬ್ ನಲ್ಲಿ ಆಯೋಜಿಸಲಾಗಿದ್ದ ಫ್ಯಾಷನ್ ಶೋನಲ್ಲಿ, 20 ಮಾಡೆಲ್ಗಳು ವಿಶೇಷ ವಿನ್ಯಾಸದ ವಸ್ತ್ರಗಳನ್ನು ತೊಟ್ಟು ಸೊಂಟ ಬಳಕಿಸುತ್ತಾ ಸ್ಟೇಜ್ ಮೇಲೆ ರ್ಯಾಪ್ ವಾಕ್ ಮಾಡ್ತಾ ನೋಡುಗರ ಗಮನ ಸೆಳೆದ್ದು ನಿಬ್ಬೇರಗಾಗುವಂತೆ ಮಾಡಿದ್ರು.