ಎಡಿಜಿಪಿ ಅಲೋಕ್ ಕುಮಾರ್ ಪ್ರೆಸಿಡೆಂಟ್ ಹೋಟೆಲ್ಗೆ ಭೇಟಿ ನೀಡಿದ ಬಳಿಕ, ಇಂದು ಹೋಟೆಲ್ ಆಡಳಿತ ಮಂಡಳಿ ದೈವದ ಮೊರೆ ಹೋಗಿದ್ದಾರೆ. ವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಹತ್ಯೆ ನಡೆದ ಪ್ರೆಸಿಡೆಂಟ್ ಹೋಟೆಲ್ನಲ್ಲಿ ಪೂಜೆ ನಡೆಯುತ್ತಿದೆ. ಅದು ಗುರೂಜಿ ಹತ್ಯೆ ನಡೆದ ಸ್ಥಳದಲ್ಲೇ ಹೋಮ ನಡೆಯುತ್ತಿದೆ. ಗುರೂಜಿ ಹತ್ಯೆ ಬಳಿಕ ಹೋಟೆಲ್ನಲ್ಲಿ ಭಯದ ವಾತಾವರಣ ಸೃಷ್ಟಿಯಾಗಿತ್ತು. ಈ ಭಯವನ್ನು ದೂರ ಮಾಡಲು ಈಗ ಆಡಳಿತ ಮಂಡಳಿ ಗುರೂಜಿ ಹತ್ಯೆಯಾದ ಸ್ಥಳದಲ್ಲೇ ಹೋಮ ನಡೆಸುತ್ತಿದೆ.