ಅಮೆರಿಕಾಗೆ ಹೊಸ ಅಧ್ಯಕ್ಷ ಯಾರು ನಾಳೆ ಬಹಿರಂಗ: ಟ್ರಂಪ್, ಕಮಲಾ ಹ್ಯಾರಿಸ್ ಭವಿಷ್ಯ ನಿರ್ಧಾರವಾಗುವುದು ಹೀಗೆ

Krishnaveni K

ಮಂಗಳವಾರ, 5 ನವೆಂಬರ್ 2024 (11:54 IST)
ವಾಷಿಂಗ್ಟನ್: ದೊಡ್ಡಣ್ಣ ಅಮೆರಿಕಾ ಅಧ್ಯಕ್ಷೀಯ ಚುನಾವಣೆಗೆ ಇಂದು ಮತದಾನ ನಡೆಯಲಿದ್ದು, ನಾಳೆ ಫಲಿತಾಂಶ ಪ್ರಕಟವಾಗಲಿದೆ. ಕಣದಲ್ಲಿರುವ ಡೊನಾಲ್ಡ್ ಟ್ರಂಪ್ ಮತ್ತು ಕಮಲಾ ಹ್ಯಾರಿಸ್ ಭವಿಷ್ಯ ನಿರ್ಧಾರವಾಗುವುದು ಹೇಗೆ ಇಲ್ಲಿದೆ ಡೀಟೈಲ್ಸ್.

ಅಮೆರಿಕಾದ 67 ನೇ ಅಧ್ಯಕ್ಷರ ಆಯ್ಕೆಗೆ ಕ್ಷಣಗಣನೆ ಶುರುವಾಗಿದೆ. ಈ ಬಾರಿ ಟ್ರಂಪ್ ಮತ್ತು ಕಮಲಾ ಹ್ಯಾರಿಸ್ ನಡುವೆ ಭಾರೀ ಪೈಪೋಟಿಯಿದೆ. ಫಲಿತಾಂಶ ಟೈ ಆದರೂ ಅಚ್ಚರಿಯಿಲ್ಲ ಎಂಬ ಪರಿಸ್ಥಿತಿಯಿದೆ. ಭಾರತೀಯ ಕಾಲಮಾನ ಪ್ರಕಾರ ಇಂದು ಸಂಜೆ 4.30 ರಿಂದ ನಾಳೆ ಬೆಳಿಗ್ಗೆ 6.30 ರವರೆಗೆ ಮತದಾನಕ್ಕೆ ಅವಕಾಶವಿದೆ.

ಮತದಾನ ಮುಕ್ತಾಯವಾದ ಕೂಡಲೇ ಮತ ಎಣಿಗೆ ಕಾರ್ಯ ನಡೆಯಲಿದೆ. ಈಗಾಗಲೇ 7.50 ಕೋಟಿ ಅಮೆರಿಕನ್ನರು ಇಮೇಲ್ ಮೂಲಕ ಹಕ್ಕು ಚಲಾಯಿಸಿದ್ದಾರೆ. ಉಳಿದವರು ಮತಗಟ್ಟೆಗೆ ಬಂದು ಮತ ಚಲಾಯಿಸಲಿದ್ದಾರೆ. ಅಮೆರಿಕಾ ಅಧ್ಯಕ್ಷರಾಗಿ ಆಯ್ಕೆಯಾಗಬೇಕಾದರೆ ಒಟ್ಟು 538 ಎಲೆಕ್ಟೋರಲ್ ಕಾಲೇಜುಗಳ ಪೈಕಿ 270 ಮತ ಪಡೆಯಬೇಕು. ಒಂದು ವೇಳೆ ಫಲಿತಾಂಶ ಟೈ ಆದರೆ ಅಮೆರಿಕಾದ ಕಳೆಮನೆ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ನಲ್ಲಿ ವಿಜಯಿ ಅಭ್ಯರ್ಥಿಯನ್ನು ತೀರ್ಮಾನಿಸಲಾಗುತ್ತದೆ.

ಈ ಬಾರಿ ಕಮಲಾ ಮತ್ತು ಟ್ರಂಪ್ ನಡುವೆ ಭಾರೀ ಪೈಪೋಟಿಯಿದ್ದು, ಸಮೀಕ್ಷೆಗಳ ಪ್ರಕಾರ ಕಮಲಾ ಪರ ಶೇ.49 ಮತ್ತು ಟ್ರಂಪ್ ಪರ ಶೇ.48 ಮತಗಳು ಬಂದಿವೆ. ಈ ಚುನಾವಣೆ ಫಲಿತಾಂಶ ಭಾರತಕ್ಕೂ ಮಹತ್ವದ್ದಾಗಿದೆ. ಇದುವರೆಗೆ ಟ್ರಂಪ್ ಮತ್ತು ಬೈಡನ್ ಅವಧಿಯಲ್ಲಿ ಭಾರತದೊಂದಿಗೆ ಅಮೆರಿಕಾ ಉತ್ತಮ ಬಾಂಧವ್ಯ ಹೊಂದಿತ್ತು. ಇದೀಗ ಕಮಲಾ ಹ್ಯಾರಿಸ್ ಕೂಡಾ ಭಾರತೀಯ ಮೂಲದವರಾಗಿರುವುದರಿಂದ ಭಾರತಕ್ಕೆ ಅನುಕೂಲವಾಗಬಹುದು ಎಂದೇ ನಿರೀಕ್ಷಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ