ಗುಂಡಿನ ದಾಳಿಯಿಂದ ಡೊನಾಲ್ಡ್ ಟ್ರಂಪ್ ಜಸ್ಟ್ ಮಿಸ್: ಆದರೆ ಟ್ರಂಪ್ ಮೇಲೇ ಎಲ್ಲರ ಡೌಟು

Krishnaveni K

ಸೋಮವಾರ, 15 ಜುಲೈ 2024 (09:17 IST)
Photo Credit: X
ಷಿಕಾಗೊ: ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಚುನಾವಣಾ ಪ್ರಚಾರದ  ವೇಳೆ ಗುಂಡಿನ ದಾಳಿ ನಡೆದಿದ್ದು, ಇದೀಗ ಜನರಿಗೆ ಅವರ ಮೇಲೇ ಡೌಟು ಶುರುವಾಗಿದೆ. ಟ್ರಂಪ್ ಏನು ಬೇಕಾದರೂ ಮಾಡಬಹುದು ಎನ್ನುತ್ತಿದ್ದಾರೆ.

ಪೆನ್ಸಿಲ್ವೆನಿಯಾದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಯುವಕನೊಬ್ಬ ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ತಕ್ಷಣವೇ ಅಮೆರಿಕಾದ ಸೀಕ್ರೆಟ್ ಸರ್ವಿಸ್ ಸಿಬ್ಬಂದಿ ಕಾರ್ಯಪ್ರವೃತ್ತರಾಗಿದ್ದು ಆತನನ್ನು ಹೊಡೆದುರುಳಿಸಿದ್ದಾರೆ. ದಾಳಿಕೋರನನ್ನು 20 ವರ್ಷದ ಮ್ಯಾಥ್ಯೂ ಕ್ರೂಕ್ಸ್ ಎಂದು ಗುರುತಿಸಲಾಗಿದೆ. ಈತ ವಿದ್ಯಾರ್ಥಿ ಎಂದು ಹೇಳಲಾಗಿದೆ.

ಟ್ರಂಪ್ ರನ್ನು ಗುರಿಯಾಗಿಸಿ ಹಲವು ಸುತ್ತಿನ ಗುಂಡಿನ ದಾಳಿ ನಡೆಸಿದ್ದಾನೆ. ಈ ವೇಳೆ ಟ್ರಂಪ್ ಬಲಕಿವಿಯ ಮೇಲ್ಭಾಗದ ಚರ್ಮ ಹರಿದು ಹೋಗಿದೆ. ಭಾಷಣ ಆಲಿಸಲು ಬಂದಿದ್ದ ವ್ಯಕ್ತಿಯೊಬ್ಬ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ್ದಾನೆ. ಆದರೆ ಟ್ರಂಪ್ ಜಸ್ಟ್ ಮಿಸ್ ಆಗಿದ್ದಾರೆ. ತಕ್ಷಣವೇ ಡಯಾಸ್ ನ ಕೆಳಗೆ ಬಗ್ಗಿ ಪ್ರಾಣ ಉಳಿಸಿಕೊಂಡಿದ್ದಾರೆ. ತಕ್ಷಣವೇ ಅವರನ್ನು ಭದ್ರತಾ ಸಿಬ್ಬಂದಿಗಳು ಸುತ್ತುವರಿದು ಕಾಪಾಡಿದ್ದಾರೆ.

ಆದರೆ ಅರೋಪಿಯೂ ಟ್ರಂಪ್ ಅವರ ರಿಪಬ್ಲಿಕ್ ಪಕ್ಷದ ನೊಂದಾಯಿತ ಸದಸ್ಯನೇ ಆಗಿದ್ದ. ಹೀಗಾಗಿ ಈಗ ಟ್ರಂಪ್ ಮೇಲೇ ಎಲ್ಲರಿಗೂ ಅನುಮಾನ ಶುರುವಾಗಿದೆ. ಚುನಾವಣೆಯಲ್ಲಿ ಅನುಕಂಪ ಗಿಟ್ಟಿಸಲು ಸ್ವತಃ ಟ್ರಂಪ್ ಅವರೇ ಈ ದಾಳಿ ಮಾಡಿಸಿರಬಹುದು ಎಂದು ಚರ್ಚೆಯಾಗುತ್ತಿದೆ. ಇನ್ನೊಂದು ಮೂಲಗಳ ಪ್ರಕಾರ ಟ್ರಂಪ್ ಅವರ ಕಿವಿಗೆ ತಗುಲಿದ್ದು ಗಾಜಿನ ಚೂರು ಅಷ್ಟೇ. ಆಗಂತುಕ ಗುಂಡಿನ ದಾಳಿ ನಡೆಸಿದಾಗ ಅದು ಟೆಲಿಪ್ರಾಮ್ಟರ್ ಗೆ ತಗುಲಿ ಅದರ ಗಾಜಿನ ಚೂರುಗಳು ಕಿವಿಗೆ ತಗುಲಿತ್ತು ಎಂದು ಚರ್ಚೆಯಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ