ಮೂರನೇ ವಿಶ್ವಯುದ್ಧ ಭೀತಿ: ರಷ್ಯಾದಲ್ಲಿ ತುರ್ತುಪರಿಸ್ಥಿತಿ ಹೇರಿದ ವ್ಲಾಡೀಮಿರ್ ಪುಟಿನ್

ಗುರುವಾರ, 13 ಅಕ್ಟೋಬರ್ 2016 (16:12 IST)
ಮೂರನೇ ವಿಶ್ವಯುದ್ಧವಾಗುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಎಲ್ಲಾ ಅಧಿಕಾರಿಗಳಿಗೆ ತುರ್ತು ಆದೇಶವೊಂದನ್ನು ಹೊರಡಿಸಿದ್ದು ತಮ್ಮ ತಮ್ಮ ಸಂಬಂಧಿಕರನ್ನು ವಾಪಸ್ ರಷ್ಯಾಗೆ ಕರೆಸಿಕೊಳ್ಳುವಂತೆ ರಷ್ಯಾದ ಅಧ್ಯಕ್ಷ ವ್ಲಾಡಿಮೀರ್ ಪುಟಿನ್ ಸಲಹೆ ನೀಡಿದ್ದಾರೆ.
 
ವರದಿಗಳ ಪ್ರಕಾರ, ಪುಟಿನ್ ರಷ್ಯಾ ದೇಶದ ಎಲ್ಲಾ ರಾಯಭಾರಿಗಳು ತಮ್ಮ ತಮ್ಮ ಸಂಬಂಧಿಕರನ್ನು ತವರು ದೇಶಕ್ಕೆ ಕರೆ ತರುವಂತೆ ಆದೇಶ ನೀಡಿದ್ದಾರೆ.  
 
ವಿದೇಶಗಳಲ್ಲಿರುವ ರಷ್ಯಾದ ಅಧಿಕಾರಿಗಳು, ರಾಜಕಾರಣಿಗಳು ಮತ್ತು ಸಾರ್ವಜನಿಕ ಕ್ಷೇತ್ರಗಳಲ್ಲಿರುವ ನಾಗರಿಕರು ಕೂಡಲೇ ತಮ್ಮ ಸ್ವದೇಶಕ್ಕೆ ಮರಳಬೇಕು ಎಂದು ಆದೇಶ ನೀಡಿದ್ದಾರೆ. 
 
ರಷ್ಯಾದ ರಕ್ಷಣಾ ತಜ್ಞ ಸ್ಟಾನ್ಸಿಸಾವ್ ಬೆಲ್ಕೋವಿಸ್ಕಿ ಪ್ರಕಾರ, ನ್ಯಾಟೋ ಮೈತ್ರಿಕೂಟಗಳು ಮೂರನೇ ವಿಶ್ವಯುದ್ಧಕ್ಕೆ ತಯಾರಿ ನಡೆಸುತ್ತಿವೆಯೇ ಎನ್ನುವ ಅನುಮಾನ ಕಾಡುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
 
ಫ್ರಾನ್ಸ್ ದೇಶಕ್ಕೆ  ತೆರಳುತ್ತಿದ್ದ ವ್ಲಾಡಿಮೀರ್ ಪುಟಿನ್, ಕೂಡಲೇ ಪ್ರಯಾಣವನ್ನು ರದ್ದುಗೊಳಿಸಿ, ಎಲ್ಲಾ ಅಧಿಕಾರಿಗಳೊಂದಿಗೆ ಸುಧೀರ್ಘವಾಗಿ ಚರ್ಚಿಸಿದ ನಂತರ ಆತಂಕಕಾರಿ ಬೆಳವಣಿಗೆಗಳು ಕಂಡು ಬಂದಿವೆ.
 
ಸರಕಾರಿ ಉದ್ಯೋಗಗಳಲ್ಲಿರುವ ನೌಕರರ ಮಕ್ಕಳು ವಿದೇಶದಲ್ಲಿ ಓದುತ್ತಿದ್ದಲ್ಲಿ ಕೂಡಲೇ ವಾಪಸ್ ಕರೆಸಿಕೊಳ್ಳಬೇಕು. ಇಲ್ಲವಾದಲ್ಲಿ ಯಾವುದೇ ಬಡ್ತಿಗೆ ಅರ್ಹರಾಗುವುದಿಲ್ಲ ಎಂದು ರಷ್ಯಾದ ಅಧ್ಯಕ್ಷ ವ್ಲಾಡೀಮಿರ್ ಪುಟಿನ್ ಗುಡುಗಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ