ಇರಾನ್, ಇಸ್ರೇಲ್ ಯುದ್ಧ ಇಫೆಕ್ಟ್: ಭಾರತದಲ್ಲಿ ಇದರ ಬೆಲೆ ಹೆಚ್ಚೋದು ಗ್ಯಾರಂಟಿ

Krishnaveni K

ಸೋಮವಾರ, 16 ಜೂನ್ 2025 (16:50 IST)
ನವದೆಹಲಿ: ಇರಾನ್ ಮತ್ತು ಇಸ್ರೇಲ್ ನಡುವೆ ಭೀಕರ ಯುದ್ಧ ನಡೆಯುತ್ತಿದ್ದು, ಇದರ ಪರಿಣಾಮ ಇತರ ದೇಶಗಳ ಮೇಲೂ ಪರಿಣಾಮ ಬೀರಲಿದೆ. ಭಾರತದಲ್ಲಿ ಈ ಒಂದು ವಸ್ತುವಿನ ಬೆಲೆ ಹೆಚ್ಚೋದು ಗ್ಯಾರಂಟಿ ಎನ್ನಲಾಗುತ್ತಿದೆ.

ಇರಾನ್ ನಲ್ಲಿ ಭಾರೀ ತೈಲ ನಿಕ್ಷೇಪಗಳಿದ್ದು, ಅವುಗಳ ಮೇಲೆಯೇ ಇಸ್ರೇಲ್ ನಿನ್ನೆ ದಾಳಿ ನಡೆಸಿತ್ತು. ಭಾರತವೂ ಕಚ್ಚಾ ತೈಲ ವಿಚಾರದಲ್ಲಿ ಇರಾನ್ ಮೇಲೆ ಅವಲಂಬಿತವಾಗಿದೆ. ಇದೀಗ ಇಸ್ರೇಲ್ ದಾಳಿ ಮಾಡಿರುವುದರಿಂದ ಇರಾನ್ ತೈಲ ನಿಕ್ಷೇಪಗಳಿಗೆ ಹಾನಿಯಾಗಿದೆ.

ಇದೀಗ ಇರಾನ್-ಇಸ್ರೇಲ್ ಯುದ್ಧದಿಂದಾಗಿ ಭಾರತದಲ್ಲೂ ತೈಲ ಬೆಲೆ ಹೆಚ್ಚಳವಾಗುವ ಸಾಧ್ಯತೆಯಿದೆ. ಕೇವಲ ಭಾರತ ಮಾತ್ರವಲ್ಲ, ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲೂ ತೈಲ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ತಜ್ಞರು ಹೇಳುತ್ತಿದ್ದಾರೆ.

ಇನ್ನು, ಇಸ್ರೇಲ್ ಜೊತೆಗೂ ಭಾರತ ಉತ್ತಮ ಬಾಂಧವ್ಯ ಹೊಂದಿದೆ. ಇದೀಗ ಯುದ್ಧ ಹೀಗೇ ಮುಂದುವರಿದರೆ ಭಾರತಕ್ಕೆ ಸಾಕಷ್ಟು ಹೊಡೆತ ಬೀಳಲಿದೆ. ಕೇವಲ ತೈಲ ಬೆಲೆ ಮಾತ್ರವಲ್ಲ, ಚಿನ್ನದ ದರದಲ್ಲೂ ಭಾರೀ ಏರಿಕೆಯಾಗುತ್ತಿದೆ. ಚಿನ್ನದ ದರ ಈಗಾಗಲೇ ದಾಖಲೆಯ ಏರಿಕೆ ಕಂಡಿದೆ. ಯುದ್ಧ ಹೀಗೇ ಮುಂದುವರಿದರೆ ಚಿನ್ನದ ದರ ಮತ್ತಷ್ಟು ಏರಿಕೆಯಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ