ವಿದ್ಯುತ್ ಅವಘಡ ತಪ್ಪಿಸಿದ ನಾಯಿಗೆ 'ಹೋಮ್ ಟೌನ್ ಹೀರೋ' ಪ್ರಶಸ್ತಿ( ವಿಡಿಯೋ)

ಶುಕ್ರವಾರ, 7 ಅಕ್ಟೋಬರ್ 2016 (12:51 IST)
ಸಾಕು ಪ್ರಾಣಿಗಳು ಮಾಲೀಕರ ಜೀವವನ್ನು ಉಳಿಸಿದ ಹಲವು ದೃಷ್ಟಾಂತಗಳು ನಮ್ಮ ಮುಂದಿವೆ. ಅಂತಹದ್ದೇ ಒಂದು ಪ್ರಸಂಗವಿದು. 11 ವರ್ಷದ ಸಾಕು ನಾಯಿಯೊಂದು ಭಾರೀ ವಿದ್ಯುತ್ ಅವಘಡದ ಬಗ್ಗೆ ಎಚ್ಚರಿಸಿ ಮಾಲೀಕನ ಸಂಪೂರ್ಣ ಕುಟುಂಬವನ್ನು ರಕ್ಷಿಸಿದೆ. ನಾಯಿಯ ಈ ಚಾತುರ್ಯಕ್ಕೆ ಪ್ರತಿಯಾಗಿ ಅದಕ್ಕೆ 'ಹೋಮ್ ಟೌನ್ ಹೀರೋ' ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ ಎಂದು ವಾಷಿಂಗ್ಟನ್ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ. 
11 ವರ್ಷದ ಪಗ್ ಜಾತಿ ನಾಯಿ ಜಾಕ್ಸನ್  ಅಮೇರಿಕಾದ ಇದಾಹೋದ ಮೆರಿಡಿಯನ್ ನಗರದಲ್ಲಿ ನೀಡಲಾಗುವ 'ಹೋಮ್ ಟೌನ್ ಹೀರೋ' ಪ್ರಶಸ್ತಿಯನ್ನು ಗಳಿಸುತ್ತಿರುವ ಮೊದಲ ಮಾನವೇತರ ಜೀವಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 
 
ಜಾಸ್ಕನ್ ಮಾಲೀಕರಾದ ಮೈಕೆಲಾ ಸೆಬ್ರೀ ಅವರ ನಿವಾಸದಲ್ಲಿ ವಿದ್ಯುತ್ ತಂತಿಯಲ್ಲಿ ಉಂಟಾದ ದೋಷದಿಂದ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಮನೆಯೇ ಸುಟ್ಟು ಹೋಗಬೇಕಿತ್ತು. ಆದರೆ ಜಾಕ್ಸನ್‌ ಅದೇಗೆ ಅದನ್ನು ಗೊತ್ತು ಮಾಡಿಕೊಂಡಿತು. ಸಂಜ್ಞೆ ಮಾಡೊ ಮೂಲಕ ನಡೆಯಲಿರುವ ಅವಘಡದ ಬಗ್ಗೆ ಮುನ್ನೆಚ್ಚರಿಕೆ ನೀಡಿತು. 
 
ಮತ್ತೀಗ ಜಾಸ್ಕನ್ ಹೋಮ್ ಟೌನ್ ಹೀರೋ ಪ್ರಶಸ್ತಿಯನ್ನು ನೀಡಲಾಗಿದ್ದು, ಇದರ ಫೋಟೋವನ್ನು ನಗರದ ಅಧಿಕೃತ ಫೇಸ್‌ಬುಕ್ ಪೇಜ್‌ನಲ್ಲಿ ಹಂಚಲಾಗಿದೆ.

  ವಿದ್ಯುತ್ ಅವಘಡ ತಪ್ಪಿಸಿದ ನಾಯಿಗೆ 'ಹೋಮ್ ಟೌನ್ ಹೀರೋ' ಪ್ರಶಸ್ತಿ( ವಿಡಿಯೋ)

ವೆಬ್ದುನಿಯಾವನ್ನು ಓದಿ